ವಸತಿ, ಸಾರಿಗೆ ಸಮಿತಿಗೆ ಬಾರದ ಬಾಕಿ ಮೊತ್ತ

7
ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ

ವಸತಿ, ಸಾರಿಗೆ ಸಮಿತಿಗೆ ಬಾರದ ಬಾಕಿ ಮೊತ್ತ

Published:
Updated:

ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನ ನಡೆದು 8 ತಿಂಗಳು ಕಳೆದರೂ ಸರ್ಕಾರ ವಿವಿಧ ಸಮಿತಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಮುಖ್ಯವಾಗಿ ವಸತಿ ಮತ್ತು ಸಾರಿಗೆ ಸಮಿತಿಯಲ್ಲೇ ಅತ್ಯಂತ ಹೆಚ್ಚು ಹಣ ಬಾಕಿ ಉಳಿದಿದೆ.

ಸಮ್ಮೇಳನ ಸುಸೂತ್ರವಾಗಿ ನಡೆಯಲು ಮೆರವಣಿಗೆ ಸಮಿತಿ, ವೇದಿಕೆ ನಿರ್ವಹಣಾ ಸಮಿತಿ, ವಸತಿ ಮತ್ತು ಸಾರಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ಆಹಾರ ಸಮಿತಿ, ಅಲಂಕಾರ ಸಮಿತಿ, ನೋಂದಣಿ ಸಮಿತಿ, ಸ್ವಚ್ಛತಾ ಸಮಿತಿ, ಮಹಿಳಾ ಸಮಿತಿ, ಆರೋಗ್ಯ ಸಮಿತಿ, ಸ್ವಯಂ ಸೇವಕರ ನಿರ್ವಹಣ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ ಹೀಗೆ 13 ಸಮಿತಿಗಳನ್ನು ರಚಿಸಲಾಗಿತ್ತು. ಇವುಗಳಲ್ಲಿ ವಸತಿ ಮತ್ತು ಸಾರಿಗೆ ಸಮಿತಿಗೆ ಹೆಚ್ಚು ಹಣ ಬರಬೇಕಿದೆ.

ವಸತಿ ಮತ್ತು ಸಾರಿಗೆ ಸಮಿತಿಯಡಿ ಒಟ್ಟು ₹ 84.66 ಲಕ್ಷ ಹಣ ಖರ್ಚಾಗಿದೆ. ಇದರಲ್ಲಿ ₹ 62 ಲಕ್ಷ ವಸತಿಗೆ ₹ 15 ಲಕ್ಷ ಕೆಎಸ್‌ಆರ್‌ಟಿಸಿ ಹಾಗೂ ಇತರೆ ₹ 7.5 ಲಕ್ಷ ವ್ಯಯವಾಗಿದೆ. ಸದ್ಯ, ₹ 50 ಲಕ್ಷ ಮಾತ್ರ ಬಿಡುಗಡೆಯಾಗಿದ್ದು, ಇನ್ನೂ ₹ 34.66 ಲಕ್ಷ ಹಣ ಬರಬೇಕಿದೆ.‌

ವಸತಿ ಸೌಲಭ್ಯಕ್ಕಾಗಿ ಖರ್ಚಾದ ಒಟ್ಟು ₹ 62 ಲಕ್ಷದ ಪೈಕಿ ₹ 35 ಲಕ್ಷವನ್ನು ಈಗಾಗಲೇ ಪಾವತಿಸಲಾಗಿದೆ. ಸಾರಿಗೆ ವೆಚ್ಚ ₹ 15 ಲಕ್ಷದಲ್ಲಿ ₹ 10 ಲಕ್ಷವನ್ನು ಬಿಡುಗಡೆ ಮಾಡಲಾಗಿದೆ. ಉಳಿದ ₹ 5 ಲಕ್ಷ ಕೆಎಸ್‌ಆರ್‌ಟಿಸಿಗೆ ನೀಡಬೇಕಿದೆ.

ವಸತಿ ವೆಚ್ಚದಲ್ಲಿ ಹೋಟೆಲ್‌ ಮಾಲೀಕರಿಗೆ ಹಣ ಪಾವತಿಯಾಗಬೇಕಿದೆ. ಶೇ 50ರಷ್ಟು ರಿಯಾಯಿತಿ ದರದಲ್ಲಿ ಹೋಟೆಲ್ ಮಾಲೀಕರು ಕೊಠಡಿಗಳನ್ನು ಬಾಡಿಗೆಗೆ ನೀಡಿದ್ದರು. ಅವರಿಗೆ ಹಣ ಪಾವತಿಯಾಗದ್ದರಿಂದ ಇದೀಗ ಅವರು ಪರಿತಪಿಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ‘ವಿವಿಧ ಸಮಿತಿಗಳ ಬಿಲ್‌ಗಳು ಹಂತಹಂತವಾಗಿ ಮಂಜೂರಾಗುತ್ತಿದೆ. ಬಾಕಿ ಉಳಿದಿರುವ ಮೊತ್ತ ಆದಷ್ಟು ಬೇಗ ಸಂದಾಯವಾಗುತ್ತದೆ’ ಎಂದು ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !