ಅತ್ಯಾಚಾರ ಘಟನೆಗಳನ್ನು ಖಂಡಿಸಿದ ಕಲಾವಿದರು

7
ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ

ಅತ್ಯಾಚಾರ ಘಟನೆಗಳನ್ನು ಖಂಡಿಸಿದ ಕಲಾವಿದರು

Published:
Updated:
ಜಾರ್ಖಾಂಡ್‌ನಲ್ಲಿ ಬೀದಿ ನಾಟಕ ಕಲಾವಿದೆಯರ ಮೇಲೆ ನಡೆದ ಅತ್ಯಾಚಾರವನ್ನು ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಮೈಸೂರಿನಲ್ಲಿ ಖಂಡಿಸಿದರು.‌

ಮೈಸೂರು: ಜಾರ್ಖಾಂಡ್‌ನಲ್ಲಿ ಬೀದಿ ನಾಟಕ ಕಲಾವಿದೆಯರ ಮೇಲೆ ನಡೆದ ಅತ್ಯಾಚಾರವನ್ನು ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಖಂಡಿಸಿದರು.‌

ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ಕಲಾವಿದರು, ಸಾಹಿತಿಗಳು, ಪ್ರಗತಿಪರ ಚಿಂತಕರು ಮಹಿಳೆಯರ ರಕ್ಷಣೆಗೆ ತುರ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಟ ಮಂಡ್ಯ ರಮೇಶ್, ‘ಜಾರ್ಖಾಂಡ್‌ನಲ್ಲಿ ಮಾನವ ಕಳ್ಳಸಾಗಣಿಕೆ ಕುರಿತು ಬೀದಿ ನಾಟಕ ಪ್ರದರ್ಶನ ನೀಡುತ್ತಿದ್ದ 11 ಮಂದಿ ಕಲಾವಿದರ ಪೈಕಿ 5 ಮಂದಿ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಇದೊಂದು ಹೇಯ ಕೃತ್ಯ’ ಎಂದು ಕಿಡಿಕಾರಿದರು.

ಇಂತಹ ಘಟನೆಗಳು ಎಲ್ಲಿ ಬೇಕಾದರೂ ನಡೆಯಬಹುದಾದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣಗೊಂಡಿದೆ. ಪ್ರಭುತ್ವದ ಬೆಂಬಲ ಇಲ್ಲದೇ ಇಂತಹ ಕಾರ್ಯಗಳು ಘಟಿಸುವುದಿಲ್ಲ. ವಿಧಾನಸೌಧದಲ್ಲಿ ಇಂತಹ ವಿಷಯ ಚರ್ಚೆಯಾಗಿ, ಅದರ ಫಲಶೃತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಲುಪಿಸಬೆಕು ಎಂದು ಆಗ್ರಹಿಸಿದರು.

ನಟ ಮೈಮ್ ರಮೇಶ್ ಮಾತನಾಡಿ, ಪ್ರಧಾನಮಂತ್ರಿ, ರಾಷ್ಟ್ರಪತಿಯಾದಿಯಾಗಿ ಎಲ್ಲರೂ ಈ ಘಟನೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದರು.‌

ನೆಲೆಹಿನ್ನೆಲೆ, ಆವಿಷ್ಕಾರ, ಜನಮನ, ನಟನಾ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಪ್ರಗತಿಪರ ಚಿಂತಕರಾದ ಗೋಪಾಲಕೃಷ್ಣ, ಜಗನ್ನಾಥ, ಶಶಿಕಲಾ, ವರ್ಷಾ, ಚಂದ್ರಕಲಾ, ರವಿ, ದಿಶಾ ರಮೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !