ಧೈರ್ಯತುಂಬಲು ಪಥಸಂಚಲನ

ಭಾನುವಾರ, ಏಪ್ರಿಲ್ 21, 2019
26 °C

ಧೈರ್ಯತುಂಬಲು ಪಥಸಂಚಲನ

Published:
Updated:
Prajavani

ಮೈಸೂರು: ಮತದಾರರಲ್ಲಿ ಧೈರ್ಯ ತುಂಬಲು ಪೊಲೀಸರು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದರು.

ಉದಯಗಿರಿಯ ಡಿ.ಬನುಮಯ್ಯ ಪಾಲಿಟೆಕ್ನಿಕ್ ಕಾಲೇಜಿನಿಂದ ಎಂ.ಜಿ.ರಸ್ತೆ, ಉದಯಗಿರಿ ವೃತ್ತ, ಅಂಚೆ ಕಚೇರಿ ರಸ್ತೆ, ಪಿಎಫ್‌ ಕಚೇರಿ ರಸ್ತೆ, ಮಾನಸ ಶಾಲೆ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪಥಸಂಚಲನ ನಡೆಯಿತು.

ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಎಂ.ಮುತ್ತುರಾಜ್ ಅವರ ನೇತೃತ್ವದಲ್ಲಿ ನಡೆದ ಈ ಪಥಸಂಚಲನದಲ್ಲಿ ನಗರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಮಾಂಡೊ ಪಡೆ, ಅಶ್ವಾರೋಹಿದಳ, ಕೇಂದ್ರ ಸಶಸ್ತ್ರ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಕೆಎಸ್‌ಆರ್‌ಪಿ ಪಡೆಗಳು ಭಾಗವಹಿಸಿದ್ದವು. ಗಸ್ತು ವಾಹನಗಳಾದ ಚೀತಾ, ಗರುಡ, ಇಂಟರ್‌ಸೆಪ್ಟರ್, ಮೊಬೈಲ್ ಕಮಾಂಡ್ ವಾಹನ, ಪೊಲೀಸ್ ಬ್ಯಾಂಡ್‌ಗಳು ಭಾಗವಹಿಸಿದ್ದವು.

ಕೆ.ಆರ್.ಠಾಣಾ ವ್ಯಾಪ್ತಿಯ ಅಗ್ರಹಾರ ವೃತ್ತ, ತ್ಯಾಗರಾಜ ರಸ್ತೆ, ಸುಣ್ಣದಕೇರಿ, ನಾರಯಣಶಾಸ್ತ್ರಿ ರಸ್ತೆ, ಸಿದ್ದಪ್ಪ ಚೌಕ, ಹುಲ್ಲಿನಬೀದಿ, ನಂಜುಮಳಿಗೆ, ಹೊಸಬಂಡಿಕೇರಿ, ಚಾಮುಂಡಿಪುರಂ, ಗೌರಿಶಂಕರನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆ.ಆರ್.ಠಾಣೆಯ ಇನ್‌ಸ್ಪೆಕ್ಟರ್ ವಿ.ನಾರಾಯಣಸ್ವಾಮಿ, ಸಬ್‌ಇನ್‌ಸ್ಪೆಕ್ಟರ್ ಸುನೀಲ್ ಹಾಗೂ 50ಕ್ಕೂ ಹೆಚ್ಚಿನ ಸಿಬ್ಬಂದಿ ಪಥ ಸಂಚಲನ ನಡೆಸಿದರು.

ಇದಲ್ಲದೇ ನರಸಿಂಹರಾಜಠಾಣೆ ಹಾಗೂ ಮಂಡಿ ಠಾಣಾ ವ್ಯಾಪ್ತಿಗಳಲ್ಲಿ ಮತ್ತು ಜಯಪುರ ಠಾಣಾ ಪೊಲೀಸರು ಉದ್ಬೂರಿನಲ್ಲಿ ಪಥಸಂಚಲನ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !