ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉನ್ನತ ಮೌಲ್ಯದಿಂದ ಉತ್ತಮ ಬದುಕು: ಸಿ.ಎನ್.ಮಂಜೇಗೌಡ

ಕರ್ನಾಟಕ ಸೇನಾ ಪಡೆಯಿಂದ ಶಂಕರ ಜಯಂತಿ; ಸಾಧಕರಿಗೆ ಶಂಕರಾಚಾರ್ಯ ಪ್ರಶಸ್ತಿ
Published 26 ಮೇ 2024, 16:14 IST
Last Updated 26 ಮೇ 2024, 16:14 IST
ಅಕ್ಷರ ಗಾತ್ರ

ಮೈಸೂರು: ‘ಮನುಷ್ಯ ಉನ್ನತ ಮೌಲ್ಯಗಳನ್ನು ರೂಢಿಸಿಕೊಂಡಾಗ ಸಾವಿನ ನಂತರವೂ ಬದುಕಬಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.

ನಗರದ ಶೃಂಗೇರಿ ಶಂಕರ ಮಠದಲ್ಲಿ ಕರ್ನಾಟಕ ಸೇನಾ ಪಡೆಯಿಂದ ಭಾನುವಾರ ಆಯೋಜಿಸಿದ್ದ ‘ಶಂಕರ ಜಯಂತಿ- ತತ್ವಜ್ಞಾನಿಗಳ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ‘ಶಂಕರರು ಜ್ಞಾನಕ್ಕೆ ಮತ್ತೊಂದು ಹೆಸರಾಗಿದ್ದು, ಅಪಾರ ಮೌಲ್ಯದಿಂದಾಗಿ ಇಂದಿಗೂ ಜೀವಂತವಾಗಿದ್ದಾರೆ’ ಎಂದರು.

‘ಜೀವನದಲ್ಲಿ ನಾವು ಧೈರ್ಯ ಮತ್ತು ಆತ್ಮವಿಶ್ವಾಸ ಹೊಂದಿರಬೇಕು. ಮುಖ್ಯವಾಗಿ ಹೆಣ್ಣುಮಕ್ಕಳು ಇಂದು ಉತ್ತಮ ಸ್ಥಾನಗಳನ್ನು ಅಲಂಕರಿಸುತ್ತಿದ್ದು, ಇನ್ನಷ್ಟು ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಶಂಕರಾಚಾರ್ಯ, ಗಾಂಧೀಜಿಯಂಥ ಮಹಾನ್ ವ್ಯಕ್ತಿಗಳು ನಮಗೆ ಪ್ರೇರಣೆ’ ಎಂದು ತಿಳಿಸಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ‘ಬೌದ್ಧ, ಜೈನ ಮತ್ತು ಇತರ ಧರ್ಮಗಳಿಂದ ಅಪಾಯಕ್ಕೊಳಗಾಗಿದ್ದ ಹಿಂದೂ ಧರ್ಮಕ್ಕೆ ಮತ್ತೆ ಪುನರುಜ್ಜೀವನ ನೀಡಿದವರು ಶಂಕರಾಚಾರ್ಯರು. ಅವರಿಲ್ಲದಿದ್ದರೆ ನಮ್ಮ ಸ್ಥಿತಿಯನ್ನು ಊಹಿಸಲು ಕಷ್ಟವಾಗುತ್ತಿತ್ತು’ ಎಂದು ಹೇಳಿದರು.

ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನರರೋಗ ತಜ್ಞ ಡಾ.ಶುಶ್ರುತ್ ಗೌಡ, ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಕೆ.ವಿ.ಲಕ್ಷ್ಮೀದೇವಿ (ವೈದ್ಯಕೀಯ ಕ್ಷೇತ್ರ), ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ (ಹೋಟೆಲ್ ಕ್ಷೇತ್ರ), ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್.ಆದರ್ಶ್, ಮೂಡ ಸಹಾಯಕ ಕಾರ್ಯನಿರ್ವಾಹಕ ವಲಯ ಅಧಿಕಾರಿ ಆರ್.ಸಿ.ಕೆಂಪರಾಜ್ (ಸೇವಾಕ್ಷೇತ್ರ), ದಿ ಸಿಟಿ ಕೋ– ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಎನ್.ಸ್ವರೂಪ್ (ಸಹಕಾರ ಕ್ಷೇತ್ರ), ನಟ ಎಸ್ .ಜಯಪ್ರಕಾಶ್ (ಚಲನಚಿತ್ರ ಕ್ಷೇತ್ರ) ಅವರಿಗೆ ‘ಶಂಕರಾಚಾರ್ಯ ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ 42 ವಿದ್ಯಾರ್ಥಿಗಳಿಗೆ ದಿನೇಶ್ ಕೋಚಿಂಗ್ ಸೆಂಟರ್ ಸ್ಥಾಪಕ ಎನ್.ವಿ.ದಿನೇಶ್ ಪ್ರತಿಭಾ ಪುರಸ್ಕಾರ ನೀಡಿದರು.

ಶಂಕರಾಚಾರ್ಯರ ಕುರಿತು ಸಂಸ್ಕೃತ ವಿದ್ವಾಂಸರಾದ ಲೀಲಾ ಕೆ. ಪ್ರಕಾಶ್, ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯ ಶಂಕರ್ ಮಾತನಾಡಿದರು. ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಉಪಸ್ಥಿತರಿದ್ದರು.

ಹಿಂದೂ ಧರ್ಮಕ್ಕೆ ಪುನರುಜ್ಜೀವನ ನೀಡಿದ ಜ್ಞಾನಿ ಸಂಸ್ಕೃತಿ, ಜ್ಞಾನಕ್ಕೆ ಹೆಸರಾದ ಶಂಕರಾಚಾರ್ಯ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT