ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಯಶೋಧರ ದಾಸಪ್ಪ ಪಠ್ಯ ಸೇರಿಸಿ’

Published 29 ಮೇ 2024, 14:23 IST
Last Updated 29 ಮೇ 2024, 14:23 IST
ಅಕ್ಷರ ಗಾತ್ರ

ಮೈಸೂರು: ‘ಶೂದ್ರ ಸಮುದಾಯದ ಮಹಿಳೆಯು ಉತ್ತಮ ಶಿಕ್ಷಣ ಪಡೆದರೆ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಬಲ್ಲರು ಎಂಬುದಕ್ಕೆ ಯಶೋಧರ ದಾಸಪ್ಪ ಅವರು ಬದುಕು ಉದಾಹರಣೆ’ ಎಂದು ಲೇಖಕ ಬೂಕನಕೆರೆ ವಿಜೇಂದ್ರ ಹೇಳಿದರು.

ಇಲ್ಲಿನ ವಿದ್ಯಾವರ್ಧಕ ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ನಡೆದ ಕೆ.ಎಚ್‌.ರಾಮಯ್ಯ ವಿದ್ಯಾರ್ಥಿ ನಿಲಯದ ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರ ಸಭೆ, ಯಶೋಧರ ದಾಸಪ್ಪ ಅವರ ಜನ್ಮ ದಿನಾಚರಣೆ ಮತ್ತು 75 ವರ್ಷ ವಯಸ್ಸಿನ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಸರ್ಕಾರವೂ ಶಾಲಾ ಪಠ್ಯಪುಸ್ತಕಗಳಲ್ಲಿ ಯಶೋಧರ ದಾಸಪ್ಪ ಅವರ ಕುರಿತು ಮಾಹಿತಿ ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಒಂದು ಅದ್ಭುತ ವ್ಯಕ್ತಿತ್ವದ ಪರಿಚಯ ಮಾಡಬೇಕು’ ಎಂದು ಮನವಿ ಮಾಡಿದರು.

ಸದಸ್ಯರಾದ ಎನ್‌.ಬೋರಪ್ಪ, ಕೆ.ಎಸ್‌.ನಿಂಗಪ್ಪ ಅವರನ್ನು ಸನ್ಮಾನಿಸಿದರು. ಸಂಘದ ವಾರ್ಷಿಕ ಲೆಕ್ಕಪತ್ರಕ್ಕೆ ಸದಸ್ಯರ ಅನುಮೋದನೆ ಪಡೆಯಲಾಯಿತು.

ಕಾರ್ಯಕ್ರಮದಲ್ಲಿ ಎಚ್‌.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜ ತುಳಸಿದಾಸ್‌, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಿ.ವಿಶ್ವನಾಥ್‌, ಗೌರವಾಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ, ಅಧ್ಯಕ್ಷ ಪಿ.ಬೋರೇಗೌಡ, ಉಪಾಧ್ಯಕ್ಷ ಅಪ್ಪಾಜಿ ಗೌಡ, ಕಾರ್ಯದರ್ಶಿ ಕೆಂಪರಾಜೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT