ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯದಿಂದ ವನ್ಯಜೀವಿ ಸಪ್ತಾಹ ಇಂದಿನಿಂದ

Published 1 ಅಕ್ಟೋಬರ್ 2023, 17:14 IST
Last Updated 1 ಅಕ್ಟೋಬರ್ 2023, 17:14 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯವು 69ನೇ ವರ್ಷದ ವನ್ಯಜೀವಿ ಸಪ್ತಾಹ ಅಂಗವಾಗಿ ಅ.2ರಿಂದ 8ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ವನ್ಯಜೀವಿಗಳ ಮಹತ್ವವನ್ನು ಸಾರಲು ಅ.2ರಂದು ಬೆಳಿಗ್ಗೆ 7.30ಕ್ಕೆ ಜಾಥಾ ಹಮ್ಮಿಕೊಳ್ಳಲಾಗಿದೆ. ಅರಮನೆ ಬಲರಾಮ ದ್ವಾರದಿಂದ (ಕೋಟೆ ಆಂಜನೇಯ ದೇವಸ್ಥಾನದ ಹತ್ತಿರದಿಂದ) ಹೊರಟು ಮೃಗಾಲಯದ (ಹಿಂಭಾಗದ ಸರ್ವಿಸ್ ಗೇಟ್)ವರೆಗೆ 200 ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಮತ್ತು ಮೃಗಾಲಯ ಅಧಿಕಾರಿಗಳುಮ ಸಿಬ್ಬಂದಿ, ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಉದ್ಘಾಟಿಸಲಿದ್ದಾರೆ.

ವನ್ಯಜೀವಿ ಛಾಯಾಚಿತ್ರಗಳು ಹಾಗೂ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮವನ್ನು ಮೃಗಾಲಯದ ಬಯಲು ವೇದಿಕೆಯಲ್ಲಿ ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿದೆ. ದೊಡ್ಡಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನ ಕಾರ್ಯಕ್ರಮದಡಿ 5ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು 3 ವಿಭಾಗಗಳಲ್ಲಿ ನಡೆಸಲಾಗಿತ್ತು. 235 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಛಾಯಾಗ್ರಹಣ ಸ್ಪರ್ಧೆಯಲ್ಲಿ 52 ಛಾಯಾಗ್ರಾಹಕರು ಭಾಗವಹಿಸಿದ್ದರು. ಛಾಯಾಗ್ರಹಣ ಹಾಗೂ ಚಿತ್ರಕಲೆ ಸ್ಪರ್ಧೆಯ ವಿಜೇತರ ಹೆಸರುಗಳನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುವುದು. ಕೆನರಾ ಬ್ಯಾಂಕ್ ಮೃಗಾಲಯ ಶಾಖೆಯು ಛಾಯಾಗ್ರಹಣ ಸ್ಪರ್ಧೆಯ ವಿಜೇತರಿಗೆ ₹ 20ಸಾವಿರ ಬಹುಮಾನ ಪ್ರಾಯೋಜಿಸಿದೆ. ವಿಜೇತರಿಗೆ ಅ.8ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. 

ಅ.4ರಂದು ಅಂತರರಾಷ್ಟ್ರೀಯ ಮೃಗಾಲಯ ಪ್ರಾಣಿಪಾಲಕರ ದಿನಾಚರಣೆ ನಡೆಯಲಿದೆ. ಈ ಅಂಗವಾಗಿ ಅವರಿಗೆ ಅ.3 ಹಾಗೂ 4ರಂದು ಆಟೋಟ ಆಯೋಜಿಸಲಾಗಿದೆ. ಎಲ್ಲ ಪ್ರಾಣಿಪಾಲಕರನ್ನೂ ವಿಹಾರಕ್ಕೆಂದು ರಂಗನತಿಟ್ಟು ಪಕ್ಷಿಧಾಮಕ್ಕೆ ಕರೆದೊಯ್ಯಲಾಗುವುದು. ಅ. 5 ಹಾಗೂ 6ರಂದು ಬೆಳಿಗ್ಗೆ 7ರಿಂದ 8.30ರವರೆಗೆ ಕಾರಂಜಿಕೆರೆ ಪ್ರಕೃತಿ ಉದ್ಯಾನದಲ್ಲಿ ಪ್ರಕೃತಿ ನಡಿಗೆ ಹಾಗೂ ಜೀವ ವೈವಿಧ್ಯತೆಯನ್ನು ತಿಳಿದುಕೊಳ್ಳುವ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಪಾಲ್ಗೊಳ್ಳಲು  https://forms.gle/56UMcedJLBDUzsW67 ಗೂಗಲ್‌ ನಮೂನೆಯಲ್ಲಿ ಅ.4ರಂದು ಸಂಜೆ 5.30ರೊಳಗೆ ನೋಂದಾಯಿಸಬೇಕು. ದಿನಕ್ಕೆ 15 ಮಂದಿಗೆ ಮಾತ್ರ ಅವಕಾಶವಿದೆ.

ಅ. 7ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ 8ರಿಂದ 12ನೇ ತರಗತಿಯ ಶಾಲಾ-ಕಾಲೇಜು ಮಕ್ಕಳಿಗೆ ಪ್ರಬಂಧ ಬರೆಯುವುದು ಹಾಗೂ ಭಾಷಣ ಸ್ಪರ್ಧೆ ನಡೆಸಲಾಗುವುದು. ಹವಾಮಾನ ಬದಲಾವಣೆ ಹಾಗೂ ವನ್ಯಜೀವಿಗಳ ಮೇಲೆ ಅದರೆ ಪ್ರಭಾವ’ ಹಾಗೂ ‘ವನ್ಯಜೀವಿಗಳ ಮೇಲೆ ಪ್ಲಾಸ್ಟಿಕ್‌ನ ಪರಿಣಾಮಗಳು’ ಎನ್ನುವುದು ‌ಸ್ಪರ್ಧೆಯ ವಿಷಯವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT