ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಡಿ.ಕೋಟೆ | ಹನಿಟ್ರ್ಯಾಪ್‌: ಮೂವರ ಬಂಧನ

Published 21 ಮೇ 2024, 5:35 IST
Last Updated 21 ಮೇ 2024, 5:35 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಮಹಿಳೆಯೊಬ್ಬರನ್ನು ಬಳಸಿ ಹನಿಟ್ರ್ಯಾಪ್‌ ಮಾಡಿದ ಆರೋಪದಡಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯಾದ ಪಟ್ಟಣದ ಕಾರ್ತಿಕ್, ಪ್ರಕರಣಕ್ಕೆ ಸಹಕಾರ ನೀಡಿದ ಮಂಡ್ಯ ಮೂಲದ ಚಂದ್ರು ಹಾಗೂ ಮೌಲ ಎಂಬುವರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ: ತಾಲ್ಲೂಕಿನ ಮಾದಾಪುರ ಮೂಲದ ಮಹಿಳೆ ಗ್ರಾಮದಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿರುವ ಪವನ್ ಜುವೆಲರ್ಸ್ ಮಾಲೀಕನೊಂದಿಗೆ ಮೊದಲು ಸಲಿಗೆಯಿಂದ ವರ್ತಿಸಿ ಮನೆಯಲ್ಲಿ ಕಷ್ಟವಿದೆ ಎಂದು ಹೇಳಿ ಹಲವು ಬಾರಿ ಹಣ ಪಡೆದಿರುತ್ತಾರೆ.

ನಂತರ ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿರುವ ತಮ್ಮ ಮನೆಗೆ ಕರೆದಿದ್ದು, ಪವನ್ ಆಕೆಯ ಮನೆಗೆ ಬಂದು ಹೋಗುವುದನ್ನು ಮತ್ತು ಅಕ್ರಮ ಸಂಬಂಧವಿರುವುದನ್ನು ಗಮನಿಸಿದ ಕಾರ್ತಿಕ್ ಹಣ ವಸೂಲಿಗೆ ಮುಂದಾಗಿದ್ದಾನೆ.

ಆರೋಪಿ ಕಾರ್ತಿಕ್ ಮಹಿಳೆಯನ್ನು ಒಪ್ಪಿಸಿ ಮೈಸೂರಿನ ವಿಜಯನಗರದ ಲಾಡ್ಜ್ ಕರೆಸಿಕೊಂಡಿದ್ದಾನೆ. ಪವನ್ ಅವರಿಗೆ ಬೆದರಿಕೆಯೊಡ್ಡಿ, ಸುಮಾರು ₹1ಲಕ್ಷ ಹಣ ಫೋನ್ ಪೇ ಮೂಲಕ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ.

ನಂತರ ನಿರಂತರವಾಗಿ ಬೆದರಿಸುತ್ತಾ ಸುಮಾರು ₹8 ಲಕ್ಷಕ್ಕೂ ಹೆಚ್ಚು ಹಣ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿಂದೆ ₹1.5 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ.

ಈ ಸಂಬಂಧ ಪವನ್ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT