ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿಯಿಂದ ಮಹಿಳಾಪರ ಯೋಜನೆ ಜಾರಿ: ಬಿ.ಹರ್ಷವರ್ಧನ್

Published 4 ಮಾರ್ಚ್ 2024, 14:13 IST
Last Updated 4 ಮಾರ್ಚ್ 2024, 14:13 IST
ಅಕ್ಷರ ಗಾತ್ರ

ನಂಜನಗೂಡು: ‘ಮಹಿಳೆಯರಿಗೆ ರಾಜಕೀಯ ಮೀಸಲಾತಿ ಸೇರಿದಂತೆ ಮಹಿಳಾ ಪರವಾದ ಹಲವು ಕಾರ್ಯಕ್ರಮ ರೂಪಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಬಗ್ಗೆ ಅರಿವು ಮೂಡಿಸಬೇಕು’ ಎಂದು ಬಿಜೆಪಿ ಮುಖಂಡ ಬಿ.ಹರ್ಷವರ್ಧನ್ ಹೇಳಿದರು.

ನಗರದ ದೇವೀರಮ್ಮನಹಳ್ಳಿ ಬಡಾವಣೆಯ ಶರಣ ಸಂಗಮ ಮಠದ ಆವರಣದಲ್ಲಿ ಸೋಮವಾರ ನಡೆದ ನಾರಿಶಕ್ತಿ ವಂದನಾ ವಾಕಥಾನ್ ಹಾಗೂ ತಿರಂಗಾ ಯಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮಹಿಳೆಯರು ಪುರುಷರಷ್ಟೇ ಸರಿಸಮಾನರು ಎಂಬುದನ್ನು ಅಕ್ಷರಶಃ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜಕೀಯವಾಗಿ ಶೇ.33ರಷ್ಟು ಮೀಸಲಾತಿಯನ್ನು ಘೋಷಣೆ ಮಾಡುವ ಮೂಲಕ ಮಹಿಳೆಯರೂ ಕೂಡ ಸಂವಿಧಾನಿಕ ಹುದ್ದೆಯನ್ನು ಅಲಂಕರಿಸಬೇಕೆಂಬುದು ಅವರ ಧ್ಯೇಯವಾಗಿದೆ’ ಎಂದರು.

‘ಭೇಟಿ ಪಡಾವೋ, ಭೇಟಿ ಬಚಾವೋ ಯೋಜನೆ ಜಾರಿಗೊಳಿಸಿ ಸ್ತ್ರೀ ಕುಲಕ್ಕೆ ಸಿಗಬೇಕಾದ ಎಲ್ಲಾ ಸೂಕ್ತ ಸ್ಥಾನಮಾನವನ್ನು ನರೇಂದ್ರ ಮೋದಿ ಮಾಡಿದ್ದಾರೆ. ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್‍ಗಳಲ್ಲಿ ನೇರ ಸಾಲ ಸೌಲಭ್ಯ ಸಿಗುವ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್‌ ಇನ್ನು ಆರು ತಿಂಗಳಲ್ಲಿ ಮೆಚ್ಯುರಿಟಿಗೆ ಬಂದು ಅದರ ಸೌಲಭ್ಯವನ್ನು ರಾಜ್ಯದ ಲಕ್ಷಾಂತರ ಹೆಣ್ಣು ಮಕ್ಕಳು ಪಡೆದುಕೊಳ್ಳಲಿದ್ದಾರೆ’ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದಿನಿ ಮಹೇಶ್, ಮಂಗಳಾ ಸೋಮಶೇಖರ್, ಸಿ.ಚಿಕ್ಕರಂಗನಾಯ್ಕ, ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ದರಾಜು, ಬಾಲಚಂದ್ರು, ಎನ್.ಸಿ.ಬಸವಣ್ಣ, ನಗರಸಭಾ ಸದಸ್ಯರಾದ ಮಹದೇವಸ್ವಾಮಿ, ಕಪಿಲೇಶ್, ಮಹದೇವಪ್ರಸಾದ್, ಮೀನಾಕ್ಷಿ ನಾಗರಾಜು, ಮುಖಂಡರಾದ ಪಿ.ಮಹೇಶ್, ಶ್ರೀನಿವಾಸ ರೆಡ್ಡಿ, ಎನ್.ವಿ.ವಿನಯಕುಮಾರ್, ಮಹೇಶ್‍ ಬಾಬು, ಮಹೇಶ್, ಉಮೇಶ್ , ಸಿದ್ದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT