ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೂ: ಗೊರಿಲ್ಲಾ ‘ಕ್ವೆಂಬೋ’ಗೆ ಹೊಸ ಆವರಣ

Published 26 ಜನವರಿ 2024, 14:26 IST
Last Updated 26 ಜನವರಿ 2024, 14:26 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹೊಸದಾಗಿ ನಿರ್ಮಿಸಿರುವ ‘ಕುಟುಂಬ ಗುಂಪಿನ ಗೊರಿಲ್ಲಾ ಪ್ರಾಣಿ ಆವರಣ’ವನ್ನು ಗುರುವಾರ ಉದ್ಘಾಟಿಸಲಾಯಿತು.

ಬೆಂಗಳೂರಿನ ಇನ್ಫೊಸಿಸ್‌ ಫೌಂಡೇಶನ್‌ವರು ಸಿಎಸ್ಆರ್ ನಿಧಿಯಡಿ ನೀಡಿದ ಆರ್ಥಿಕ ನೆರವಿನಿಂದ ಈ ಆವರಣ ನಿರ್ಮಿಸಲಾಗಿದೆ. ಒಟ್ಟು ವಿಸ್ತೀರ್ಣ 37ಸಾವಿರ ಚದರ ಅಡಿಯಾಗಿದೆ. ಇದಕ್ಕಾಗಿ ಒಟ್ಟು ₹ 5 ಕೋಟಿ ವೆಚ್ಚವಾಗಿದೆ. ಫೌಂಡೇಶನ್‌ನ ಶ್ರುತಿ ಖುುರಾನ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಈ ಕೊಡುಗೆಯು ಅಳಿವಿನಂಚಿನಲ್ಲಿರುವ ಗೊರಿಲ್ಲಾದಂತಹ ದೊಡ್ಡವಾನರ ಪ್ರಾಣಿಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜನರು ಗೊರಿಲ್ಲಾವನ್ನು ನಮ್ಮ ದೇಶದಲ್ಲಿಯೇ ವೀಕ್ಷಿಸಲು ಇದೊಂದು ಒಳ್ಳೆಯ ಅವಕಾಶವಾಗಲಿದೆ. ಇದನ್ನು ನೋಡಲು ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗದವರಿಗೆ ಇಲ್ಲೇ ಸಾಧ್ಯವಾಗಲಿದೆ’ ಎಂದರು.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‌ ಕುಮಾರ್‌ ಮಾತನಾಡಿ, ‘ಸದ್ಯಕ್ಕೆ ಇಡೀ ದೇಶದಲ್ಲಿ ಮೈಸೂರು ಮೃಗಾಲಯದಲ್ಲಿ ಮಾತ್ರವೇ ಗೊರಿಲ್ಲಾಗಳನ್ನು ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ. ಅದಕ್ಕೆ ಆವರಣ ನಿರ್ಮಿಸಿಕೊಟ್ಟಿದ್ದಕ್ಕಾಗಿ ಇನ್ಫೊಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಬೇಕು’ ಎಂದು ಹೇಳಿದರು.

‘ಇತ್ತೀಚಿಗೆ ಜರ್ಮನಿ ದೇಶದ ಫ್ರಾಂಕ್‍ಫರ್ಟ್ ಮೃಗಾಲಯದಿಂದ ತರಿಸಲಾದ ಗಂಡು ಗೊರಿಲ್ಲಾವನ್ನು ಈಗ ಸಂದರ್ಶಕರ ವೀಕ್ಷಣೆಗೆ ಸಮರ್ಪಿಸಲಾಗಿದೆ’ ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಕೆ. ಸಿಂಗ್ ಹಾಜರಿದ್ದರು.

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹೊಸದಾಗಿ ನಿರ್ಮಿಸಿರುವ ಆವರಣದಲ್ಲಿ ‘ಕ್ವೆಂಬೋ’ ಗೊರಿಲ್ಲಾ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ/

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹೊಸದಾಗಿ ನಿರ್ಮಿಸಿರುವ ಆವರಣದಲ್ಲಿ ‘ಕ್ವೆಂಬೋ’ ಗೊರಿಲ್ಲಾ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ/

ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT