ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಪ್ರಚಲಿತ ಪತ್ರಿಕೋದ್ಯಮದ ಒಳನೋಟಗಳು’ ಕಾರ್ಯಾಗಾರ ಮಾರ್ಚ್‌ 8ರಂದು

‘ಪ್ರಜಾವಾಣಿ’ ಅಮೃತ ಮಹೋತ್ಸವ ಅಂಗವಾಗಿ ಆಯೋಜನೆ
Last Updated 7 ಮಾರ್ಚ್ 2023, 9:16 IST
ಅಕ್ಷರ ಗಾತ್ರ

ಮೈಸೂರು: ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಮಾರ್ಚ್‌ 8ರಂದು ‘ಪ್ರಚಲಿತ ಪತ್ರಿಕೋದ್ಯಮದ ಒಳನೋಟಗಳು’ ಕುರಿತು ಒಂದು ದಿನದ ಕಾರ್ಯಾಗಾರವನ್ನು ಇಲ್ಲಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದ ಸೆಮಿನಾರ್‌ ಹಾಲ್‌–1ರಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10.30ಕ್ಕೆ ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಮುಜಾಫರ್ ಅಸ್ಸಾದಿ ಉದ್ಘಾಟಿಸುವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ ಅಧ್ಯಕ್ಷತೆ ವಹಿಸುವರು.

ಬೆಳಿಗ್ಗೆ 11.15ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ‘ದೆಹಲಿ ನೋಟ: ರಾಜಕೀಯ ವರದಿಗಾರಿಕೆಯ ಸವಾಲುಗಳು’ ವಿಷಯದ ಕುರಿತು ‘ಪ್ರಜಾವಾಣಿ’ ದಾವಣಗೆರೆ ಬ್ಯೂರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ಮಧ್ಯಾಹ್ನ 12ಕ್ಕೆ 2ನೇ ಗೋಷ್ಠಿಯಲ್ಲಿ ‘ಪತ್ರಕರ್ತರಾಗಿ ಮಹಿಳೆಯರು’ ಕುರಿತು ಹಿರಿಯ ಉಪ ಸಂಪಾದಕಿ ಮಂಜುಶ್ರೀ ಎಂ.ಕಡಕೋಳ, ಮಧ್ಯಾಹ್ನ 12.45ಕ್ಕೆ 3ನೇ ಗೋಷ್ಠಿಯಲ್ಲಿ ‘ಫೀಚರ್‌–ಕೃಷಿ ಬರಹ’ ಕುರಿತ ವಿಷಯವನ್ನು ಮುಖ್ಯ ಉಪ ಸಂಪಾದಕ ಗಾಣಧಾಳು ಶ್ರೀಕಂಠ ಮಂಡಿಸುವರು.

ಮಧ್ಯಾಹ್ನ 2.15ಕ್ಕೆ 4ನೇ ಗೋಷ್ಠಿ ನಡೆಯಲಿದ್ದು, ‘ಭಾಷಾಂತರದ ಸವಾಲುಗಳು’ ಕುರಿತು ‘ಡೆಕ್ಕನ್ ಹೆರಾಲ್ಡ್‌’ ಮೈಸೂರು ಬ್ಯೂರೋ ಮುಖ್ಯಸ್ಥ ಟಿ.ಆರ್.ಸತೀಶ್‌ಕುಮಾರ್‌ ಮಾತನಾಡುವರು. ಮಧ್ಯಾಹ್ಯ 3ಕ್ಕೆ ನಡೆಯುವ 5ನೇ ಗೋಷ್ಠಿಯಲ್ಲಿ ‘ಡಿಜಿಟಲ್ ಫಸ್ಟ್‌’ ವಿಷಯದ ಬಗ್ಗೆ ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ವಿಷಯ ಮಂಡಿಸುವರು. ಮಧ್ಯಾಹ್ನ 3.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಹಿಳಾ ದಿನದ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು.

ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾಗವಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT