ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ: ಕಚೇರಿಯಲ್ಲಿ ಇಲ್ಲದ ಪಿಡಿಒ, ಸಿಬ್ಬಂದಿ ಹರಿದಾಡಿದ ವಿಡಿಯೊ

Published 4 ಮೇ 2024, 16:12 IST
Last Updated 4 ಮೇ 2024, 16:12 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ದೊಡ್ಡಬೇಲಾಳು ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸಿಬ್ಬಂದಿ ಕರ್ತವ್ಯದ ಅವಧಿ ಮುಗಿಯುವ ಮೊದಲೇ ಕಚೇರಿಯಿಂದ ತೆರಳಿದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

‘ಶನಿವಾರ ಸಂಜೆ 4 ಗಂಟೆ ವೇಳೆ ಅಗತ್ಯ ಕೆಲಸದ ಸಂಬಂಧ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿದ್ದೆ. ಆಗ ಕಚೇರಿ ಬಾಗಿಲು ತೆರೆದಿದ್ದು ಕೊಠಡಿಯೊಳಗೆ ಪಿಡಿಒ, ಕಾರ್ಯದರ್ಶಿ ಅಥವಾ ಇತರೆ ಯಾವುದೇ ಸಿಬ್ಬಂದಿ ಇರಲಿಲ್ಲ. ಕೇವಲ ಡಿ ಗ್ರೂಪ್ ನೌಕರ ಮಾತ್ರ ಇದ್ದರು. ಇದನ್ನು ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಗಿ’ ಮಾಕನಹಳ್ಳಿ ಗ್ರಾಮದ ಗ್ರಾ.ಪಂ. ಸದಸ್ಯ ಕುಮಾರ್ ಹೇಳಿದ್ದಾರೆ.

‘ಪಿಡಿಒ ಮತ್ತು ಸಿಬ್ಬಂದಿ ಯಾರಿಗೂ ಮಾಹಿತಿ ನೀಡದೆ ಮನೆಗೆ ತೆರಳಿದ್ದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ’ ಎಂದು ಕುಮಾರ್ ಆರೋಪಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ– ತಾ.ಪಂ. ಇಒ: ಈ ಸಂಬಂಧ ಸಾರ್ವಜನಿಕರಿಂದ ದೂರು ಬಂದಿದ್ದು ಪರಿಶೀಲಿಸಿ ಗೈರು ಹಾಜರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಡಿ.ಬಿ. ಸುನಿಲ್ ಕುಮಾರ್ ತಿಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT