ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರಗೂರು: ಶಂಕರಚಾರ್ಯರ ಜಯಂತಿ ಆಚರಣೆ

Published 21 ಮೇ 2024, 13:51 IST
Last Updated 21 ಮೇ 2024, 13:51 IST
ಅಕ್ಷರ ಗಾತ್ರ

ಸರಗೂರು: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಶಂಕರಚಾರ್ಯ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಶಂಕರಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ತಾಲ್ಲೂಕು ತ್ರಿಮತಸ್ಥ ಬ್ರಾಹ್ಮಣ ಸಂಘ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ‘ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ  ಎಂಬ ಘೋಷಣೆ ಪ್ರತಿಪಾದಿಸಿದರು. ಪ್ರಪಂಚದಲ್ಲಿನ ಪ್ರತಿಯೊಂದು ಜೀವಿಯೂ ಕೂಡ ಚೆನ್ನಾಗಿ ಬದುಕಿ ಬಾಳಬೇಕು ಎಂಬರ್ಥದಲ್ಲಿ ಸರ್ವೇ ಜನಾ ಸುಖಿನೋ ಭವಂತು ಮಂತ್ರ ಪಠಿಸಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದರು’ ಎಂದು ತಿಳಿಸಿದರು.

ಶಂಕರಾಚಾರ್ಯರು, ರಾಮಾನುಜಾಚಾರ್ಯರು ಹಾಗೂ ಮಧ್ವಾಚಾರ್ಯರ ತ್ರಿಮತಸ್ಥ ಆಚಾರ್ಯರ ಜಯಂತಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಪಶುಸಂಗೋಪನಾ ಸಹಾಯಕ ನಿರ್ಧೇಶಕ ವೈ.ಡಿ.ರಾಜಣ್ಣ, ಸರಗೂರು ತಾಲ್ಲೂಕು ತ್ರಿಮತಸ್ಥ ಬ್ರಾಹ್ಮಣ ಸಂಘ ಅಧ್ಯಕ್ಷ ಗುರುಪ್ರಸಾದ್, ಗೌರವಾಧ್ಯಕ್ಷ ಶಾಂಭವಮೂರ್ತಿ, ಎಸ್.ನಾರಾಯಣ್, ಉಪಾಧ್ಯಕ್ಷ ಎಸ್.ಹರೀಶ್, ಜಿ.ಕೆ.ಗೋಪಿನಾಥ್, ಕಾರ್ಯದರ್ಶಿ ಕೆ.ವಿ.ಬಾಸ್ಕರ್, ಸಹ ಕಾರ್ಯದರ್ಶಿ ಹರೀಶ್, ಶ್ರೀವತ್ಸ, ರಮೇಶ್, ಅಶ್ವಿನ್ ಕೌಂಡಿನ್ಯ, ಸುಗುಣಾ ಶ್ರೀವತ್ಸ, ತನ್ಮಯಿ, ಚಿನ್ಮಯಿ, ರವಿದಾಸ್, ಲತಾ ಶಶಿಧರ್, ಕೆ.ಬೆಳತೂರು ದಿವಾಕರ್, ಸುನೀಲ್, ಸುಷ್ಮಿತಾ, ಶ್ರೀನಿವಾಸ್, ದೊಡ್ಡಸಿದ್ದನಾಯಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT