ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾತ್ವಿಕ ಚಿಂತನೆಯ ಸಾಹಿತಿ ಬನ್ನೂರು ರಾಜು: ಎಸ್. ಶಿವರಾಜಪ್ಪ

Published 21 ಏಪ್ರಿಲ್ 2024, 15:52 IST
Last Updated 21 ಏಪ್ರಿಲ್ 2024, 15:52 IST
ಅಕ್ಷರ ಗಾತ್ರ

ಮೈಸೂರು: ‘ಸಾಹಿತಿ, ಪತ್ರಕರ್ತ ಬನ್ನೂರು ಕೆ.ರಾಜು ಅವರು ಸಾತ್ವಿಕ ಆಲೋಚನೆಯುಳ್ಳ ಸಂತತನದ ಚಿಂತಕ’ ಎಂದು ವಿಶ್ರಾಂತ ಪ್ರಾಧ್ಯಾಪಕ ಎಸ್. ಶಿವರಾಜಪ್ಪ ಬಣ್ಣಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನವು 60 ವರ್ಷ ಪೂರೈಸಿದ ಬನ್ನೂರು ರಾಜು ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ರಾಜು ಅವರು ಬರವಣಿಗೆ ಮೂಲಕ ಮಾಡಿದ್ದಾರೆ’ ಎಂದರು.

ಸಾಹಿತಿ ಬನ್ನೂರು ಕೆ.ರಾಜು, ಪತ್ನಿ ಮಹಾಲಕ್ಷ್ಮಿ ಅವರನ್ನು ಅಭಿನಂದಿಸಲಾಯಿತು.

ಹೊಸಮಠದ ಚಿದಾನಂದ ಸ್ವಾಮೀಜಿ, ಸಂಸ್ಕೃತ ವಿದ್ವಾಂಸರಾದ ಕೆ.ಲೀಲಾ ಪ್ರಕಾಶ್, ಸಮಾಜ ಸೇವಕ ರಘುರಾಂ ವಾಜಪೇಯಿ, ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಕಲಾವಿದೆ ಸುಮಾ ರಾಜ್‌ಕುಮಾರ್, ನಟ ಸುಪ್ರೀತ್, ಮೂಗೂರು ನಂಜುಂಡ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT