ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯ ವಂಚಿತ ಮಲ್ಕುಂಡಿ

ನಗರ ಸಂಚಾರ
Last Updated 18 ಫೆಬ್ರುವರಿ 2015, 9:20 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಹಲ್ಲರೆ ಗ್ರಾಮ ಪಂಚಾಯಿತಿಗೆ ಸೇರಿದ ಮಲ್ಕುಂಡಿ ಗ್ರಾಮದಲ್ಲಿ ಕನಿಷ್ಠ ಮೂಲ ಸೌಕರ್ಯವಿಲ್ಲದೆ ಜನರು ಪರಿತಪಿಸುತ್ತಿದ್ದಾರೆ.

ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ಈ ಗ್ರಾಮದಲ್ಲಿ 4000ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ 10ಕೈಪಂಪುಗಳಿದ್ದು, ಅದರಲ್ಲಿ 6ಕೈಪಂಪುಗಳು ಕೆಟ್ಟು ನಿಂತಿವೆ. ಕಳೆದ 7ತಿಂಗಳಿನಿಂದ ಸರಿಯಾದ ನೀರಿನ ವ್ಯವಸ್ಥೆಯಿಲ್ಲದೆ ಬರಗಾಳದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಶಿಷ್ಟ ಜನಾಂಗ ವಾಸಿಸುವ ಕೇರಿಯಲ್ಲಿ ಒಂದೇ ಒಂದು ಕೈಪಂಪು ಸುಸ್ಥಿತಿಯಲ್ಲಿದ್ದು, ಇಲ್ಲಿ ನೀರಿಗಾಗಿ 150 ಕುಟುಂಬಗಳು ಇರುವ ಒಂದೇ ಕೈಪಂಪನ್ನು ಬಳಸಬೇಕಾಗಿದೆ. ನೀರಿಗಾಗಿ ಹಗಲು ರಾತ್ರಿಯ ಪರಿವೆಯಿಲ್ಲದೆ ಹೆಂಗಸರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

ಜಿಲ್ಲಾ ಪಂಚಾಯಿತಿ ವತಿಯಿಂದ ನೀರಿನ ಸಮಸ್ಯೆ ಬಗೆಹರಿಸಲು ಕಿರು ನೀರು ಸರಬರಾಜು ಯೋಜನೆಗಾಗಿ 2014ನೇ ಸಾಲಿನಲ್ಲಿ ₨ 3ಲಕ್ಷ ಮಂಜೂರಾಗಿ ಕಾಮಗಾರಿ ಮುಗಿದಿದೆ. ಬಾವಿಯಿಂದ ನೀರೆತ್ತಲು ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಿಲ್ಲ,
ಪರಿಶಿಷ್ಟ ಪಂಗಡದವರು ವಾಸಿಸುವ ಬಡಾವಣೆಗಳಲ್ಲಿ ಚರಂಡಿ ಸರಿಯಾದ ವ್ಯವಸ್ಥೆಯಿಲ್ಲ. ಮನೆಗಳಲ್ಲಿ ಬಳಸಿದ ತಾಜ್ಯದ ಮಲೀನ ನೀರು ಮಣ್ಣಿನ ರಸ್ತೆಯ ಅಲ್ಲಲ್ಲಿ ಹರಿದು ಮಡುಗಟ್ಟಿ ನಿಂತಿದ್ದು, ಇದೇ ಪರಿಸ್ಥಿತಿಯಲ್ಲಿ ಜನ ಜೀವಿಸಬೇಕಾಗಿದೆ.

ಗ್ರಾಮದ ಹಿರಿಯರಾದ ನಂಜಯ್ಯ ಪ್ರಜಾವಾಣಿಯೊಂದಿಗೆ ಮಾತನಾಡಿ, ಗ್ರಾಮದಲ್ಲಿ ಬೀದಿದೀಪಗಳು ಕೆಟ್ಟು ನಿಂತಿವೆ, ಕುಡಿಯುವ ನೀರಿಗಾಗಿ ಲಭ್ಯವಿರುವ ಒಂದು ತೊಂಬೆಯ ಮುಂದೆಯೇ ಕಾಯ್ದು ನಿಲ್ಲಬೇಕಾಗಿದೆ. ಚರಂಡಿ ವ್ಯವಸ್ಥೆ ಕಲ್ಪಿಸುವುದಾಗಿ ಚುನಾವಣೆಯಲ್ಲಿ ಮಾತು ಕೊಟ್ಟು ವೊಟು ಪಡೆದವರು  ಇತ್ತಕಡೆ ತಿರುಗಿಯೂ ನೋಡಿಲ್ಲಾ. ಹೀಗಾದರೆ ನಾವು ಕನಿಷ್ಠ ಸೌಲಭ್ಯಗಳಿಗೆ ಯಾರನ್ನು ಕೇಳಬೇಕು ಎಂಬುದು ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT