ರುದ್ರಭೂಮಿ ಒದಗಿಸಲು ಮನವಿ

7

ರುದ್ರಭೂಮಿ ಒದಗಿಸಲು ಮನವಿ

Published:
Updated:
Deccan Herald

ರಾಯಚೂರು: ತಾಲ್ಲೂಕಿನ ಗಣಮೂರು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗಕ್ಕೆ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ರುದ್ರಭೂಮಿ ಇಲ್ಲದಿರುವುದರಿಂದ ಶವಸಂಸ್ಕಾರ ಸಮಯದಲ್ಲಿ ಬಹಳಷ್ಟು ತೊಂದರೆ ಅನುಭವಿಸುಂತಾಗಿದ್ದು, ಕೆರೆಯ ಮೇಲ್ಭಾಗದಲ್ಲಿರುವ ಎರಡು ಗುಂಟೆ ಜಮೀನಿನಲ್ಲಿ ಶವಸಂಸ್ಕಾರ ಮಾಡಲಾಗುತ್ತಿದ್ದು, ಮಳೆಗಾಲದಲ್ಲಿ ಕೆರೆಯ ನೀರಿನಲ್ಲಿ ಶವವನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿಯಿದೆ ಎಂದು ದೂರಿದರು.

ಸರ್ಕಾರ ರುದ್ರಭೂಮಿ ಒದಗಿಸಲು ಮುಂದಾಗಿದ್ದು, ಅಧಿಕಾರಿಗಳು ಕನಿಷ್ಠ ಕಾಳಜಿ ವಹಿಸುತ್ತಿಲ್ಲ. ಆದ್ದರಿಂದ ಗ್ರಾಮದ ಸರ್ವೆ ನಂಬರ್ 50, 55, 57 ಹಾಗೂ 63ರ ಭೂಮಿ ಸರ್ಕಾರದ್ದಾಗಿದ್ದು, ಈ ಭೂಮಿಗಳಲ್ಲಿ ರುದ್ರಭೂಮಿ ಒದಗಿಸಬೇಕು ಎಂದು ಆಗ್ರಹಿಸಿದರು.

ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ, ಚನ್ನಬಸವ ಯಕ್ಲಾಸಪುರ, ಈರಣ್ಣ ಕೆರೆಬೂದುರು, ಮಹೇಶ, ಸಣ್ಣ ಈರಪ್ಪ, ಆಂಜನೇಯ, ಮಲ್ಲೇಶ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !