ಭೂಮಿ ಮಂಜೂರು ಮಾಡಲು ಮನವಿ

7

ಭೂಮಿ ಮಂಜೂರು ಮಾಡಲು ಮನವಿ

Published:
Updated:
Deccan Herald

ರಾಯಚೂರು: ನಗರದ ಸರ್ವೆ ನಂಬರ್ 582ರ ನೀರಭಾವಿ ಕುಂಟಾ, ಜಲಾಲಗುಡ್ಡದಲ್ಲಿ 50 ವರ್ಷಗಳಿಂದ ವಾಸಿಸುತ್ತಿರುವ ವಡ್ಡರ ಜನಾಂಗದವರಿಗೆ ವಾಸಿಸಲು ಭೂಮಿಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ನಿವಾಸಿಗಳು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಜಲಾಲಸಾಬ್ ಗುಡ್ಡದಲ್ಲಿ ಬಡವರು, ದೀನ ದಲಿತರು, ಹಿಂದುಳಿದ ವರ್ಗದವರು, ವಡ್ಡರು 50 ವರ್ಷಗಳಿಂದ ವಾಸಿಸುತ್ತಿದ್ದಾರೆ. ಸರ್ವೆ ನಂಬರ್ 582ರಲ್ಲಿ 111 ಎಕರೆ 25 ಗುಂಟೆ ಇದ್ದು, ಇದರಲ್ಲಿ 20 ಎಕರೆಯನ್ನು ವಡ್ಡರ ಜನಾಂಗದವರ ವಾಸಕ್ಕೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದಿಂದ ಭೂಮಿ ಸರ್ವೆ ಮಾಡಿಸಿ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ, 3 ಎಕರೆ 20 ಗುಂಟೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಈ ಭೂಮಿ ಸಾಕಾಗುವುದಿಲ್ಲ. ಕನಿಷ್ಠ 10 ಎಕರೆ ಭೂಮಿಯಾದರೂ ಬೇಕು ಎಂದರು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತರ ಆದೇಶದಂತೆ ಸ್ಥಳ ಪರಿಶೀಲನೆ ಮಾಡಿ, ಅಕ್ರಮಿತ ಪ್ರದೇಶವನ್ನು ತೆರವುಗೊಳಿಸಿ ಬಡವರಿಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಸಂತಕುಮಾರ, ಶರಣಬಸವ, ಎನ್.ಶರಣಪ್ಪ, ಮಲ್ಲೇಶ, ಸವಾರೆಪ್ಪ, ಬೋಳಬಂಡಿ, ವೀರೇಶ, ಶೀನು, ಮಾರೆಪ್ಪ, ಯಂಕಪ್ಪ, ನಾಗಪ್ಪ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !