ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ

Published 12 ಮಾರ್ಚ್ 2024, 15:30 IST
Last Updated 12 ಮಾರ್ಚ್ 2024, 15:30 IST
ಅಕ್ಷರ ಗಾತ್ರ

ಕವಿತಾಳ: ’ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಕ್ಷೇತ್ರದ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ದೇವಸ್ಥಾನಗಳ ಅಭಿವೃದ್ಧಿಗೂ ಅನುದಾನ ನೀಡಲಾಗಿದೆʼ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪರಸಾಪುರ ಗ್ರಾಮದಲ್ಲಿ ಅಂದಾಜು ₹ 5 ಲಕ್ಷ ವೆಚ್ಚದಲ್ಲಿ ಮಾರುತೇಶ್ವರ ದೇವಸ್ಥಾನದ ಅಭಿವೃದ್ದಿ, ಯಕ್ಲಾಸ್ಪುರದಲ್ಲಿ ₹ 5 ಲಕ್ಷದಲ್ಲಿ ಗಾಳಿಮಾರೆಮ್ಮ ದೇವಿ ದೇವಸ್ಥಾನ ನಿರ್ಮಾಣ, ವಟಗಲ್‌ ಗ್ರಾಮದಲ್ಲಿ ₹ 5 ಲಕ್ಷ ದಲ್ಲಿ ಚಂದಪ್ಪ ತಾತನ ದೇವಸ್ಥಾನದ ಅಭಿವೃದ್ದಿ ಹಾಗೂ ₹10 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

’ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕು ಮತ್ತು ಗ್ರಾಮೀಣ ಭಾಗದ ಅಭಿವೃದ್ದಿ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕುʼ ಎಂದರು.

ಕವಿತಾಳ ಸಮೀಪದ ಪರಸಾಪುರ ಗ್ರಾಮದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ದೇವಸ್ಥಾನ ಅಭಿವೃದ್ದಿಗೆ ಸೋಮವಾರ ಭೂಮಿಪೂಜೆ ಮಾಡಿದರು.
ಕವಿತಾಳ ಸಮೀಪದ ಪರಸಾಪುರ ಗ್ರಾಮದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ದೇವಸ್ಥಾನ ಅಭಿವೃದ್ದಿಗೆ ಸೋಮವಾರ ಭೂಮಿಪೂಜೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸನಗೌಡ ಬಾಲರಡ್ಡಿ, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ಬಲವಂತರಾಯ ವಟಗಲ್‌, ಕರಿಯಪ್ಪ ಯಕ್ಲಾಸ್ಪುರ, ಸೋಮನಗೌಡ, ಅಮರೇಶ ವಟಗಲ್‌, ಅಮರೇಗೌಡ ಅಮೀನಗಡ, ಮಾಳಪ್ಪ, ಚಂದ್ರಶೇಖರ, ಶಿವಪ್ಪ, ಹನುಮಂತ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT