ಒಣಗಿರುವ ಬೆಳೆಗೆ ಪರಿಹಾರ ಒದಗಿಸಲು ಮನವಿ

7

ಒಣಗಿರುವ ಬೆಳೆಗೆ ಪರಿಹಾರ ಒದಗಿಸಲು ಮನವಿ

Published:
Updated:
Deccan Herald

ರಾಯಚೂರು: ತಾಲ್ಲೂಕಿನ ಕಲ್ಮಲಾ ಹೋಬಳಿಯ ಜೇಗರಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಬಾರದೇ ಬೆಳೆ ಒಣಗಿಹೋಗಿದ್ದು, ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ಸದಸ್ಯರು ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

ಹತ್ತಿ, ತೊಗರಿ ಬೆಳೆಯಲ್ಲಿ ಶೇ 80 ರಷ್ಟು ಬಿತ್ತನೆಯಾಗಿದ್ದು, ಮಳೆ ಬಾರದೆ ಬೆಳೆ ಒಣಗಿಹೋಗಿದೆ. ರೈತರು ದುಡಿಯಲು ಕೆಲಸವಿಲ್ಲದೇ, ಜಾನುವಾರುಗಳಿಗೆ ಮೇವಿಲ್ಲದೇ ತೊಂದರೆಯಲ್ಲಿದ್ದಾರೆ. ಆದ್ದರಿಂದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

2018–19ನೇ ಸಾಲಿನ ಹತ್ತಿ ಮತ್ತು ತೊಗರಿ ಬೆಳೆ ಬೆಳೆದಿರುವ ರೈತರಿಗೆ ಪರಿಹಾರ ನೀಡಬೇಕು. 2016–17 ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸಬೇಕು. ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಬೆಳೆ ವಿಮೆ ದಿನಾಂಕವನ್ನು ವಿಸ್ತರಿಸಬೇಕು. 2015–16ನೇ ಸಾಲಿನ ಬೆಳೆ ವಿಮೆಯ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ವೆಂಕಟೇಶ ಭೋವಿ, ಮುಖಂಡರಾದ ದೇವಪ್ಪ ಗುಡೆಬಲ್ಲೂರು, ದೇವೇಂದ್ರಪ್ಪ ಮಣಿಗಿರಿ, ವೆಂಕಟೇಶ ಪಿಟ್ಲ, ಯಲ್ಲಪ್ಪ, ದೇವೇಂದ್ರಪ್ಪ ಕಲ್ಲೂರು, ಶಂಕ್ರಪ್ಪ ಸಂಗನೂರು, ಶರಣಪ್ಪ ಡಬ್ಬಿ, ನರಸಿಂಗಪ್ಪ, ಬಸವರಾಜ, ಅಶೋಕ, ಮೋನಪ್ಪ, ಜಿಂದಪ್‍ಪ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !