ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಟ್ಟಿ ಚಿನ್ನದ ಗಣಿ | ಆಸ್ತಿ ತೆರಿಗೆ ಪಾವತಿಗೆ ಸೂಚನೆ

Published 7 ಜುಲೈ 2024, 14:39 IST
Last Updated 7 ಜುಲೈ 2024, 14:39 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಪ‍ಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ದೇಸಾಯಿ ಹೇಳಿದರು.

ರಿಯಾಯಿತಿ ಪಡೆಯಲು ವಾಣಿಜ್ಯ ಮಳಿಗೆಗಳು, ಅಂಗಡಿ ಮಾಲೀಕರು ಮನೆ ಮಾಲೀಕರು, ಆಸ್ತಿ ಮಾಲೀಕರು ಆದಷ್ಟು ಬೇಗನೆ ತೆರಿಗೆ ಪಾವತಿಸಬೇಕು. ಅಂಗಡಿ, ವಾಣಿಜ್ಯ ಮಳಿಗೆಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಂದರೆ ತೆರಿಗೆ ಕಟ್ಟಬೇಕು ಎಂದು ಸಲಹೆ ನೀಡಿದರು.

ಆಸ್ತಿಯ ಸ್ವಯಂ ತೆರಿಗೆ ಪಾವತಿ ಉತ್ತೇಜಿಸಲು ಸಲುವಾಗಿ ಸರ್ಕಾರ ರಿಯಾಯಿತಿ ಅವಧಿಯನ್ನು ಜುಲೈ ಅಂತ್ಯದ ತನಕ ವಿಸ್ತರಿಸಿದೆ. ಪಟ್ಟಣದ ಎಲ್ಲ ಆಸ್ತಿ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವೇಳೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಸೈಯದ್ ಅಕ್ರಮ್ ಖಾದ್ರಿ, ಅಮರೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT