ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆಗೆ ಕಕ್ಕಲದೊಡ್ಡಿ ಗ್ರಾಮ ಜಲಾವೃತ: ಸಂಕಷ್ಟದಲ್ಲಿ ಜನರು

Last Updated 27 ಆಗಸ್ಟ್ 2022, 5:08 IST
ಅಕ್ಷರ ಗಾತ್ರ

ಜಾಲಹಳ್ಳಿ (ರಾಯಚೂರು ಜಿಲ್ಲೆ): ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೋಬಳಿಯ ಕಕ್ಕಲದೊಡ್ಡಿ ಗ್ರಾಮದಲ್ಲಿ‌ ಶನಿವಾರ ಬೆಳಗಿನ ಜಾವ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಇಡೀ ಗ್ರಾಮ‌ ಜಲಾವೃತವಾಗಿದೆ.

ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ದವಸ ಧಾನ್ಯ, ಬಟ್ಟೆ ಸಮೇತವಾಗಿ ಹರಿದು ಹೋಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರಿ ಪ್ರಾಥಮಿಕ‌ ಶಾಲೆ ಆವರಣದಲ್ಲಿ ಮೊಣಕಾಲುದ್ದ ನೀರು ಸಂಗ್ರಹವಾಗಿದೆ. ಗ್ರಾಮದಲ್ಲಿರುವ ದೇವಸ್ಥಾನ ಸೇರಿದಂತೆ ಬಹುತೇಕ ಮನೆಗಳಿಗೆ ನೀರು ನುಗ್ಗಿರುವುದರಿಂದ.

2008-09ರಲ್ಲಿಯೂ ಕೂಡ ಇದೇ ರೀತಿ ಮಳೆಯಿಂದ ತೊಂದರೆ‌ ಉಂಟಾಗಿತ್ತು. ಗ್ರಾಮಸ್ಥರನ್ನು ಸ್ಥಳಾಂತರ ಮಾಡಲು ಕಂದಾಯ ಇಲಾಖೆಯಿಂದ ಹೊಸ ಕಾಲೊನಿ ನಿರ್ಮಿಸಲು ನಿವೇಶನ ಗುರುತಿಸಿದೆ. ನಿವೇಶಗಳಿಗೆ, ಶಾಲೆಗೆ, ಸ್ಮಶಾನಕ್ಕಾಗಿ ಸೇರಿ ಸುಮಾರು 10 ಎಕರೆ ಪ್ರದೇಶವನ್ನು ಮೀಸಲಿಟ್ಟು ದಾಖಲೆ ಪತ್ರ ಕೂಡ ಮಾಡಿದ್ದಾರೆ. ಆದರೆ, ಅ ನಿವೇಶನದ ಅಕ್ಕಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ.

ಗ್ರಾಮಸ್ಥರು ಕೂಡ ತಮ್ಮ ಹಳೆಯ ಮನೆಗಳನ್ನು ಬಿಟ್ಟು ಹೊಸ ಕಾಲೋನಿ ಗೆ ಸ್ಥಳಾಂತರ ಗೊಳ್ಳದೇ ಇರುವುದರಿಂದ‌ ಮರಳಿ ಇದೆ ಸಮಸ್ಯೆ ಅನುಭವಿಸುವಂತಾಗಿದೆ. ತಕ್ಷಣವೇ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ‌ಬೇಟಿ‌ ಪರಿಶೀಲಿಸಿ ಮಳೆಯಿಂದ ತೊಂದರೆ ಉಂಟಾಗಿರುವ ಕುಟುಂಬಗಳನ್ನು ಪಟ್ಟಿ ಮಾಡಿ ಅವರನ್ನು ತಕ್ಷಣವೇ ನಿವೇಶನ ಹಾಗೂ‌ ಆಶ್ರಯ ಯೋಜನೆ ಅಡಿ ಮನೆ‌‌ ಮಂಜೂರು ಮಾಡಬೇಕೆಂದು ಪ್ರಾಂತ ರೈತ ಸಂಘದ ಮುಖಂಡ ದುರಗಪ್ಪ ನಾಯಕ ಹೊರಟಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT