ಮಾನ್ವಿ: ಪಟ್ಟಣದ ಬಸವ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಎಲೆಕ್ಟ್ರಿಕ್ ಬೈಕ್ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (ಇಎಂ) ವಿಭಾಗದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಯೋಜನಾ ಕಾರ್ಯದ ಭಾಗವಾಗಿ ಎಲೆಕ್ಟ್ರಿಕ್ ಬೈಕ್ (ಬಿ-ಎಲೆಕ್ಟ್ರಿಕ್ ಇಎಂ25) ಅನ್ನು ತಯಾರಿಸಿದ್ದಾರೆ. ಈ ಪರಿಸರ ಸ್ನೇಹಿ ಬೈಕ್ ತಯಾರಿಸಲು ₹ 55 ಸಾವಿರ ಖರ್ಚು ಮಾಡಿದ್ದಾರೆ.

ಕಾಲೇಜಿನ ಕಿರಿಯ ತರಬೇತಿ ಅಧಿಕಾರಿಗಳಾದ ಉಮೇರಾ ತಬಸ್ಸುಮ್ ಮತ್ತು ಬೆಸ್ತಾ ವೀರೇಶ್ ಅವರ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿ ಕಾಳಿ ಪ್ರಸಾದ್ ನೇತೃತ್ವದ ವಿದ್ಯಾರ್ಥಿಗಳ ತಂಡವು ಈ ಇ-ಬೈಕ್ ತಯಾರಿಸಿದೆ.

ಇ-ಬೈಕ್ ನ ವಿಶೇಷತೆ: ಈ ದ್ವಿಚಕ್ರ ವಾಹನ 500 ವ್ಯಾಟ್ ಸಾಮರ್ಥ್ಯದ ಹಬ್ ಮೋಟಾರು, 60 ವೋಲ್ಟ್ ಹಾಗೂ 18 ಎಎಚ್ ಲೀಥಿಯಂ ಪಾಸ್ಫೇಟ್ನಿಂದ ತಯಾರಿಸಿದ ಬ್ಯಾಟರಿ, 60 ವೋಲ್ಟ್ ಕಂಟ್ರೋಲರ್ ಹೊಂದಿದೆ.

ಗರಿಷ್ಠ ವೇಗ ಒಂದು ಗಂಟೆಗೆ 80 ಕಿ.ಮೀನಷ್ಟು ಈ ವಾಹನ ಕ್ರಮಿಸಬಲ್ಲದು. ಸುಮಾರು 2 ತಾಸು ವಿದ್ಯುತ್ ಮೂಲಕ ಚಾರ್ಜ್ ಮಾಡಿದರೆ 50 ರಿಂದ 60 ಕಿ.ಮೀ ವರೆಗೆ ಕ್ರಮಿಸಬಲ್ಲದು. ಈ ದ್ವಿಚಕ್ರ ವಾಹನವು ಸುಮಾರು 180 ಕೆ.ಜಿ ತೂಕ ಹೊರುವ ಸಾಮರ್ಥ್ಯ ಹೊಂದಿದೆ.

‘B-ELECTRIC EM-25’ ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಇ-ಬೈಕ್ ಅನ್ನು ನಿಯಂತ್ರಿಸಬಹುದು.

ಈ ಅಪ್ಲಿಕೇಶನ್ ಅನ್ನು ಸಹ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಸೋಲಾರ್ ಸೈಕಲ್, ಸೋಲಾರ್ ಎಲೆಕ್ಟ್ರಿಕ್ ಕಾರ್ಟ್, ಸ್ಮಾರ್ಟ್ ವಾಟರ್ ಪಂಪ್, ಸ್ಮಾರ್ಟ್ ಡಸ್ಟ್ ಬಿನ್, ಸ್ಮಾರ್ಟ್ ಹೋಮ್ ಆಟೊಮೇಷನ್, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮುಂತಾದ ಹಲವು ಮಾದರಿಗಳನ್ನು ತಯಾರಿಸಿದ್ದರು. ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶಿಸಿದ ಹಲವು ಮಾದರಿಗಳು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರತಿ ವರ್ಷ ಆಯೋಜಿಸುವ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿವೆ.

ಪ್ರತಿ ವರ್ಷ ಸಮುದಾಯಕ್ಕೆ ಪ್ರಯೋಜನಕಾರಿಯಾದ ಪರಿಸರ ಸ್ನೇಹಿ ಮಾದರಿಗಳನ್ನು ತಯಾರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಹೆಮ್ಮೆ ಇದೆ
ತಿಪ್ಪಣ್ಣ ಎಂ.ಹೊಸಮನಿ ಪ್ರಾಂಶುಪಾಲ ಬಸವ ಐಟಿಐ ಮಾನ್ವಿ

ಕಾಲೇಜಿನಲ್ಲಿ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಅವಕಾಶ ಇರುವ ಕಾರಣ ಎಲ್ಲಾ ವಿದ್ಯಾರ್ಥಿಗಳು ಸೇರಿಕೊಂಡು ಇ-ಬೈಕ್ ತಯಾರಿಸಿದ್ದೇವೆ
ಕಾಳಿ ಪ್ರಸಾದ್ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿದ್ಯಾರ್ಥಿ ಬಸವ ಐಟಿಐ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.