ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: 51 ಜೋಡಿ ಸಾಮೂಹಿಕ ವಿವಾಹ ಮೇ 10ಕ್ಕೆ

ಪುಟ್ಟರಾಜ ಗವಾಯಿಗಳ ಉದ್ಯಾನದಲ್ಲಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
Published 24 ಮಾರ್ಚ್ 2024, 15:04 IST
Last Updated 24 ಮಾರ್ಚ್ 2024, 15:04 IST
ಅಕ್ಷರ ಗಾತ್ರ

ಸಿಂಧನೂರು: ಬುದ್ಧ, ಬಸವ, ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಮೇ 10ರಂದು ಸ್ಥಳೀಯ ಯಮನೂರಪ್ಪ ದರ್ಗಾದ ಆವರಣದಲ್ಲಿ 51 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಲಾಯಿತು.

ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಉದ್ಯಾನದಲ್ಲಿ ಭಾನುವಾರ ನಡೆದ ದಲಿತ ಸಂಘಟನಾ ಸಮಿತಿ ಹಾಗೂ ಭೀಮ ಘರ್ಜನೆ ಸಂಘಟನೆ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ಸಾಮೂಹಿ ವಿವಾಹ ನೋಂದಣಿಗೆ ಏಪ್ರಿಲ್ 30 ಕೊನೆಯ ದಿನವಾಗಿದೆ. ಈ ವಿವಾಹ ಕಾರ್ಯಕ್ರಮದ ಕರಪತ್ರಗಳನ್ನು ಒಂದು ವಾರದಲ್ಲಿ ತಾಲ್ಲೂಕಿನಾದ್ಯಂತ ಹಂಚಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ವಿವಾಹ ನೋಂದಣಿ ಮಾಡಲು ಇಚ್ಛಿಸಿದಲ್ಲಿ ಜಿಲ್ಲೆಯ ನಮ್ಮ ಸಂಫಟನೆಯ ಕಾರ್ಯಕರ್ತರನ್ನು ಸಂಪರ್ಕಿಸಬಹುದು. ವಧು-ವರರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಭೀಮ ಘರ್ಜನೆ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ ತಿಳಿಸಿದರು.

ಈ ವಿವಾಹ ಕಾರ್ಯಕ್ರಮ ಅತ್ಯಂತ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಡೆಯುವಂತೆ ಶ್ರಮವಹಿಸಿ ಯಶಸ್ವಿಗೊಳಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಕಲಬುರಗಿ ವಿಭಾಗೀಯ ಅಧ್ಯಕ್ಷ ಬಾಲಸ್ವಾಮಿ ತಿಡಿಗೋಳ, ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಉಪ್ಪಲದೊಡ್ಡಿ ಸೇರಿದಂತೆ ಸಿಂಧನೂರು, ಮಾನ್ವಿ, ಸಿರವಾರ, ಲಿಂಗಸೂಗೂರ, ಮಸ್ಕಿ, ರಾಯಚೂರು ತಾಲ್ಲೂಕುಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT