ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ | ಬಿಡಾಡಿ ದನಗಳ ಹಾವಳಿ: ಕ್ರಮಕ್ಕೆ ಆಗ್ರಹ

Published 20 ಮೇ 2024, 14:21 IST
Last Updated 20 ಮೇ 2024, 14:21 IST
ಅಕ್ಷರ ಗಾತ್ರ

ಮಸ್ಕಿ: ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆ ಮಾರುಕಟ್ಟೆಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ಸಂತೆಗೆ ಬರುವ ತರಕಾರಿ ಮಾರಾಟಗಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.‌ ಮಾರುಕಟ್ಟೆ ತುಂಬೆಲ್ಲ ದನಗಳ ತಿರುಗಾಡುತ್ತಿದ್ದರಿಂದ ಖರೀದಿಗೆ ಬರುವ ಗ್ರಾಹಕರು ಅಂಗಡಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದು ವ್ಯಾಪಾರ ಕುಸಿಯುತ್ತಿದೆ ಎಂದು ತರಕಾರಿ ಮಾರಾಟಗಾರರು ಆರೋಪಿಸಿದ್ದಾರೆ.

ಸಂತೆ ಮಾರುಕಟ್ಟೆ ಅಭಿವೃದ್ಧಿಗೆ ಸಾಕಷ್ಟ ವರಮಾನ ಬರುತ್ತದೆ. ಆದರೆ, ಪುರಸಭೆ ಮಾರಾಟಗಾರರಿಗೆ ಸೂಕ್ತ ಸ್ಥಳದ ವ್ಯವಸ್ಥೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ತರಕಾರಿ ಮಾರುಕಟ್ಟೆ ಹರಾಜು ಹೆಚ್ಚಿನ ಮೊತ್ತಕ್ಕೆ ಹೋಗುತ್ತದೆ. ಆದರೆ ಮಾರುಕಟ್ಟೆ ಅಭಿವೃದ್ಧಿ ಮಾತ್ರ ಆಗಿಲ್ಲ. ಮಾರುಕಟ್ಟೆಗೆ ಮೂಲ ಸೌಕರ್ಯಗಳು ಕಲ್ಪಿಸಿಲ್ಲ ಎಂದು ತರಕಾರಿ ಮಾರಾಟಗಾರ ಲಿಂಗಪ್ಪ ದೂರಿದರು.

ತರಕಾರಿ ಮಾರುಕಟ್ಟೆ ಹರಾಜಿನಿಂದಲೇ ಬರುವ ಹಣದಲ್ಲಿ ಮಾರುಕಟ್ಟೆ ಅಭಿವೃದ್ಧಿ ಪಡಿಸಬಹುದಾಗಿತ್ತು. ಮಸ್ಕಿ ತಾಲ್ಲೂಕು ಕೇಂದ್ರವಾಗಿದ್ದರೂ ಸಹ ಮಾರುಕಟ್ಟೆ ಮಾತ್ರ ಅಭಿವೃದ್ಧಿಯಾಗದೆ ಇರುವುದು ವಿಪರ್ಯಾಸ ಎಂದು ಮಾರಾಟಗಾರರು ತಮ್ಮ ಅಳಲು ತೋಡಿಕೊಂಡರು.

ಸಂತೆಯಲ್ಲಿ ಹೆಚ್ಚಿನ ಬಿಡಾಡಿ ದನಗಳು ಬರುತ್ತಿದ್ದರಿಂದ ಸಂತೆ ಕರ ಕಟ್ಟಲು ಮಾರಾಟಗಾರರು ಹಿಂದೇಟು ಹಾಕುತ್ತಿದ್ದಾರೆ. ಈಗಾದರೇ ನಮಗೆ ನಷ್ಟವಾಗುತ್ತದೆ ಎಂದು ಮಾರುಕಟ್ಟೆ ಹರಾಜು ಪಡೆದ ಸಿದ್ದು ಮುರಾರಿ ಹೇಳಿದ್ದಾರೆ. ಈ ಬಗ್ಗೆ ಸಹಾಯಕ ಆಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿ ಬಿಡಾಡಿ ದನಗಳನ್ನು ನಿಯಂತ್ರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT