ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದಗಲ್: ಕೇಂದ್ರದ ತಂಡ ಭೇಟಿ, ಪರಿಶೀಲನೆ

Published 16 ಮೇ 2024, 14:22 IST
Last Updated 16 ಮೇ 2024, 14:22 IST
ಅಕ್ಷರ ಗಾತ್ರ

ಮುದಗಲ್: ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಎಂ. ಆರ್.–1, ಎಂ.ಆರ್.-2 ಲಸಿಕೆಗಳ ಪ್ರಗತಿ ಪರಿಶೀಲನೆಗೆ ಕೇಂದ್ರದ ತಂಡ ಪಟ್ಟಣ ಸಮೀಪದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ಮಾಕಾಪುರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಬನ್ನಿಗೋಳ ಹಾಗೂ ತೊಡಕ್ಕಿ ಗ್ರಾಮಗಳಿಗೆ ಕೇಂದ್ರದ ತಂಡದ ಸಿಬ್ಬಂದಿ ಗುರುವಾರ ಮನೆ ಮನೆಗೆ ಭೇಟಿ ನೀಡಿ ಜನರ ಬಳಿ ಲಸಿಕೆಗಳ ಮಾಹಿತಿ ಪಡೆದರು.

ಕೇಂದ್ರ ತಂಡದ ವೈದ್ಯಾಧಿಕಾರಿ ಡಾ.ಸೂರ್ಯಕಾಂತ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಲಿಂಗರಾಜ ವಿಶ್ವಕರ್ಮ, ಅಂಜನಮ್ಮ, ಶಾಂತಮ್ಮ, ಶೇಕ್ಷಾವಲಿ, ಆದಮ್ಮ, ಸುನೀಲಮ್ಮ, ಸರಸ್ವತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT