ನವೋದಯ ವೈದ್ಯಕೀಯ ಕಾಲೇಜಿಗೆ ಪ್ರಶಸ್ತಿ

7

ನವೋದಯ ವೈದ್ಯಕೀಯ ಕಾಲೇಜಿಗೆ ಪ್ರಶಸ್ತಿ

Published:
Updated:
ಉತ್ತರಪ್ರದೇಶದ ಆಗ್ರಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜಿಗೆ ನೀಡಿದ ‘ಭಾರತದ ಗುಣಮಟ್ಟದ ಶಿಕ್ಷಣ ಪ್ರಶಸ್ತಿ–2018’ಯನ್ನು ನವೋದಯ ಶಿಕ್ಷಣ ಟ್ರಸ್ಟ್‌ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಾಸ್‌ ಪ್ರಕಾಶ್‌ ಹಾಗೂ ಅಮೃತರೆಡ್ಡಿ ಅವರು ಸ್ವೀಕರಿಸಿದರು

ರಾಯಚೂರು: ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು ‘ಭಾರತದ ಗುಣಮಟ್ಟದ ಶಿಕ್ಷಣ ಪ್ರಶಸ್ತಿ–2018’ ಕ್ಕೆ ಭಾಜನವಾಗಿದೆ.

ಉತ್ತರ ಪ್ರದೇಶದ ಅಗ್ರಾದಲ್ಲಿ ಕಾರ್ಪೋರೇಟ್‌ ಕೌನ್ಸಿಲ್‌ ಫಾರ್‌ ಲೀಡರ್‌ಶಿಪ್‌ ಆ್ಯಂಡ್‌ ಅವೇರ್‌ನೆಸ್‌ (ಸಿಸಿಎಲ್‌ಎ) ಭಾನುವಾರ ಏರ್ಪಡಿಸಿದ್ದ ‘ಪ್ರಗತಿಯತ್ತ ಭಾರತ ಸಮಾರಂಭ’ದಲ್ಲಿ ನವೋದಯ ಶಿಕ್ಷಣ ಟ್ರಸ್ಟ್‌ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಾಸ್‌ ಪ್ರಕಾಶ್‌ ಹಾಗೂ ಅಮೃತರೆಡ್ಡಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

‘ನವೋದಯ ಶಿಕ್ಷಣ ಸಂಸ್ಥೆಯು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಶಸ್ತಿ ಲಭಿಸಿರುವುದು ಔಚಿತ್ಯವಾಗಿದೆ. ಸಂಸ್ಥೆಗೆ ಈ ಅತ್ಯುನ್ನತ ಪ್ರಶಸ್ತಿ ಬರಲು ಕಾರಣರಾದ ಸಂಸ್ಥೆಯ ಅಧಿಕಾರಿಗಳು, ಪ್ರಾಂಶುಪಾಲರು, ನಿರ್ದೇಶಕರು, ಎಲ್ಲ ನೌಕರರು, ವಿದ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಹಳೇ ವಿದ್ಯಾರ್ಥಿಗಳಿಗೆಲ್ಲ ಈ ಮೂಲಕ ಧನ್ಯವಾದ ಸಲ್ಲಿಸುತ್ತೇನೆ’ ಎಂದು ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌.ಆರ್‌.ರೆಡ್ಡಿ ತಿಳಿಸಿದ್ದಾರೆ.

ರಾಜ್ಯದ ಅತ್ಯುನ್ನತ 10 ರ‍್ಯಾಂಕ್‌ಕಿಂಗ್‌ ಪಟ್ಟಿಯಲ್ಲಿರುವ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ ನವೋದಯ ವೈದ್ಯಕೀಯ ಕಾಲೇಜು ಕೂಡಾ ಸೇರ್ಪಡೆಯಾಗಿದೆ ಎಂದು ತಿಳಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !