ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯದಲ್ಲಿ ನೀರಿನ ಕೊರತೆ ಇಲ್ಲ: ಮಠದ ಸ್ಪಷ್ಟನೆ

Published 2 ಏಪ್ರಿಲ್ 2024, 20:32 IST
Last Updated 2 ಏಪ್ರಿಲ್ 2024, 20:32 IST
ಅಕ್ಷರ ಗಾತ್ರ

ರಾಯಚೂರು: ಮಠದ ಆವರಣದಲ್ಲಿ ನೀರಿಲ್ಲ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಮಂತ್ರಾಲಯದಲ್ಲಿ ನೀರಿನ ಕೊರತೆ ಆಗಿಲ್ಲ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ಮಠಾಧೀಶರು ಎಲ್ಲ ಉದ್ದೇಶಗಳಿಗೆ ಸಾಕಷ್ಟು ನೀರಿನ ಸೌಕರ್ಯ ಒದಗಿಸಿದ್ದಾರೆ. ಹೀಗಾಗಿ ಭಕ್ತರು ಯಾವುದೇ ಹಿಂಜರಿಕೆಯಿಲ್ಲದೆ ಮಂತ್ರಾಲಯಕ್ಕೆ ಬರಬಹುದಾಗಿದೆ ಎಂದು ಹೇಳಿದ್ದಾರೆ.

ಕೆಲವು ಕೊಠಡಿಗಳಿಗೆ ಮಾತ್ರ ಆನ್‌ಲೈನ್ ಬುಕಿಂಗ್‌ ಸೌಲಭ್ಯ ಒದಗಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಭಕ್ತರ ಸೌಲಭ್ಯ ಮತ್ತು ಅನುಕೂಲಕ್ಕಾಗಿ 1,000 ಕೊಠಡಿಗಳು ಆಫ್‌ಲೈನ್‌ನಲ್ಲಿ ಬುಕಿಂಗ್‌ ಸೌಲಭ್ಯಕ್ಕೆ ಲಭ್ಯವಿದೆ. ಮೊದಲು ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ಕೊಠಡಿ ಹಂಚಲಾಗುತ್ತಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT