ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ; ದರ್ಶನ್‌ ಪ್ರತಿಕೃತಿ ದಹನ

ವೀರಶೈವ ಲಿಂಗಾಯತ ಮಹಾಸಭಾ-ವೀರಶೈವ ಜಂಗಮ ಸಮಾಜದಿಂದ ದರ್ಶನ್‌ ಪ್ರತಿಕೃತಿ ದಹನ
Published 18 ಜೂನ್ 2024, 14:17 IST
Last Updated 18 ಜೂನ್ 2024, 14:17 IST
ಅಕ್ಷರ ಗಾತ್ರ

ಲಿಂಗಸುಗೂರು: ವೀರಶೈವ ಲಿಂಗಾಯತರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯದಂತ ಪ್ರಕರಣಗಳು ಮೇಲಿಂದ ನಡೆಯುತ್ತಿರುವುದು ಸೇರಿದಂತೆ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಖಂಡಿಸಿ ವೀರಶೈವ ಲಿಂಗಾಯತ ಮಹಾಸಭಾ ಮತ್ತು ವೀರಶೈವ ಜಂಗಮ ಸಮಾಜದವರು ಜಂಟಿಯಾಗಿ ಪ್ರತಿಭಟನೆ ನಡೆಸಿದರು.

ಮಂಗಳವಾರ ಈಶ‍್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪುರಸಭೆ, ಗಡಿಯಾರ ವೃತ್ತ, ಅಂಚೆ ಕಚೇರಿ, ಶಾಸಕರ ಶಾಲೆ, ಬಸ್‍ ನಿಲ್ದಾಣ ವೃತ್ತ, ಕೋರ್ಟ್‌ ರಸ್ತೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತ ಉಪ ವಿಭಾಗಾಧಿಕಾರಿ ಕಚೇರಿಗೆ ಆಗಮಿಸಿತು. ದಾರಿ ಮಧ್ಯೆ ಗಡಿಯಾರ ವೃತ್ತದಲ್ಲಿ ಆರೋಪಿ ನಟ ದರ್ಶನ್‌ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

‘ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂಶಗಳನ್ನು ಬಹಿರಂಗಪಡಿಸುತ್ತಿರುವ ಪೊಲೀಸ್‍ ಅಧಿಕಾರಿಗಳು ತೊಡಕು ಸೃಷ್ಟಿಸಿ ಕೊಲೆಗಡುಕರ ರಕ್ಷಣೆಗೆ ಮುಂದಾಗುವ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಿವೆ. ದಿನಕ್ಕೊಂದು ಅಂಶ ಬೆಳಕಿಗೆ ತರುವ ನೆಪದಲ್ಲಿ ಪ್ರಕರಣದ ಮೂಲ ಆಶಯಕ್ಕೆ ಧಕ್ಕೆ ತರುತ್ತಿದ್ದಾರೆ. ಕೊಲೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಸಚಿವರು, ಶಾಸಕರು, ಅಧಿಕಾರಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ಮುಖಂಡರಾದ ಬಸನಗೌಡ ಮೇಟಿ, ಭೂಪನಗೌಡ ಕರಡಕಲ್ಲ, ಮಲ್ಲಣ್ಣ ವಾರದ, ಗಿರಿಮಲ್ಲನಗೌಡ ಕರಡಕಲ್ಲ, ಪ್ರಭುಸ್ವಾಮಿ ಅತ್ನೂರು, ವೀರಭಧ್ರಯ್ಯ ಹಿರೇಮಠ, ಸೋಮಶೇಖರ ಐದನಾಳ, ಮಹಾದೇವಯ್ಯ ಗೌಡೂರು, ಉಮೇಶ ಚೆನ್ನಿ, ರಾಜು ಹಿರೇಮಠ, ಚೆನ್ನಬಸವ ಹಿರೇಮಠ, ವೆಂಕನಗೌಡ ಪಾಟೀಲ, ಜಡೆಯ್ಯಶಾಸ್ತ್ರಿ, ಮಹಾಂತೇಶ, ಅಮರೇಶ ಮಡಿವಾಳರ, ಜಂಗಮಮೂರ್ತಿ, ಮಹೇಶ ನಂದಿಕೋಲಮಠ, ಸೂಗಯ್ಯ ದಾಸೋಹಮಠ,

ನಾಗಯ್ಯ ಸೊಪ್ಪಿಮಠ, ಶಿವಕುಮಾರ ನಂದಿಕೋಲಮಠ, ಅಮರೇಶ ಗಂಭೀರಮಠ, ಶರಣಯ್ಯ ದಾಸೋಹಮಠ, ವಿರೂಪಾಕ್ಷಯ್ಯ ಹಿರೇಮಠ, ಜಂಬಯ್ಯಸ್ವಾಮಿ, ನಾಗರಾಜ ತಿಳಿ, ಚಂದ್ರಶೇಖರಯ್ಯ, ಮಲ್ಲಿಕಾರ್ಜುನಯ್ಯ, ವೀರೇಶ ಜಗವತಿಮಠ, ಪರ್ವತಯ್ಯ, ಸಂತೋಷ ಸೊಪ್ಪಿಮಠ, ಕೇದಾರನಾಥ, ಗುರುಬಾಯಿ ಹಿರೇಮಠ, ಶಶಿಕಲಾ ಹಿರೇಮಠ, ಭ್ರಮರಾಂಭ ನಾಗಠಾಣಮಠ, ರತ್ನ, ವಿಜಯಲಕ್ಷ್ಮಿ, ಪುಷ್ಪಾ, ಸುಹಾಸಿನಿ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT