ಗುರುವಾರ , ಫೆಬ್ರವರಿ 9, 2023
30 °C

ಮತದಾರರ ಪಟ್ಟಿ ಪರಿಷ್ಕರಣೆಗೆ ಕರ್ತವ್ಯಕ್ಕೆ ಶಾಲಾ ಮಕ್ಕಳ ಬಳಕೆ

ಯಮನೇಶ ಗೌಡಗೇರಾ Updated:

ಅಕ್ಷರ ಗಾತ್ರ : | |

Prajavani

ದೇವದುರ್: ತಾಲ್ಲೂಕಿನ ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಹಾಗೂ ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಓ) ಈರಮ್ಮ ಅವರು 6 ಮತ್ತು 7 ತರಗತಿಯಲ್ಲಿ ಓದುವ ಮಕ್ಕಳನ್ನು ಮತದಾರರ ಪಟ್ಟಿ ಪರಿಷ್ಕರಣೆಗೆ ಬಳಕೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ನೀಡುವ ಬರದಲ್ಲಿ ಬೂತ್‌ಮಟ್ಟದ ಜವಾಬ್ದಾರಿ ವಹಿಸಿಕೊಂಡಿರುವ ಶಿಕ್ಷಕರಿ ಶಾಲಾ ಮಕ್ಕಳ ಶಿಕ್ಷಣ ಹಕ್ಕು ಕಿತ್ತುಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ರಾಘವೇಂದ್ರ ಇಟಗಿ ಒತ್ತಾಯಿಸಿದ್ದಾರೆ.

ತಹಶೀಲ್ದಾರ್‌ ಶ್ರೀನಿವಾಸ್ ಚಾಪೆಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಬಿಎಲ್‌ಓ ಗಳಿಗೆ ಶೇ 90 ರಿಂದ 95 ರಷ್ಟು ಗುರಿ ಸಾಧಿಸುವಂತೆ ಹೇಳಿರುವುದು ನಿಜ. ರೈತರು ಕೂಲಿ ಕಾರ್ಮಿಕರು ಬೆಳಗಿನ ಜಾವ ಲಭ್ಯವಿರುತ್ತಾರೆ. ಆ ಅವಧಿಯಲ್ಲಿ ಕೆಲಸ ನಿರ್ವಹಿಸುವಂತೆ ಪೂರ್ವಭಾವಿ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಬಿಎಲ್‌ಓಗಳು ಶಾಲಾ ಅವಧಿಯಲ್ಲಿ ಮಕ್ಕಳ ಪಾಠ ಬೋಧನೆಯಲ್ಲಿ ಕಾರ್ಯನಿರ್ವಹಿಸಿ ಶಾಲಾ ಪ್ರಾರಂಭಕ್ಕೂ ಮುನ್ನ ಮತ್ತು ಶಾಲಾ ಅವಧಿ ಮುಗಿದ ನಂತರ ಬಿಎಲ್‌ಓ ಕರ್ತವ್ಯ ನಿರ್ವಹಿಸುವಂತೆ ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಬಿಎಲ್‌ಓ ಅವರು ದಿನಾಲೂ ತಡವಾಗಿ ಶಾಲೆಗೆ ಹೋಗುತ್ತಾರೆ ಎಂದು ಮಾಹಿತಿ ಇದೆ. ಹಾಗಾಗಿ ಅವರು ಶಾಲಾವಧಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಇದೆ. ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಮಾತನಾಡಿ ವರದಿ ಪಡೆದು ಕ್ರಮಕ್ಕೆ ಸೂಚಿಸುವೆ‘ ಎಂದು ’ಪ್ರಜಾವಾಣಿ‘ಗೆ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು