ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ಕುರಿ ಮೇಯಿಸಲು ಹೋಗಿದ್ದ ಬಾಲಕ ಕಾಲು ಜಾರಿ ಕೆರೆಗೆ ಬಿದ್ದು ಸಾವು

Published 5 ಮೇ 2024, 7:41 IST
Last Updated 5 ಮೇ 2024, 7:41 IST
ಅಕ್ಷರ ಗಾತ್ರ

ಕವಿತಾಳ: ಕುರಿ ಮೇಯಿಸಲು ಹೋಗಿದ್ದ ಬಾಲಕ ಕುರಿಗಳಿಗೆ ನೀರು ಕುಡಿಸಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಮಸ್ಕಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಆನಂದ ಶಿವಪ್ಪ (9) ಮೃತ ಬಾಲಕ, ಕುರಿ ಮೇಯಿಸಲು ತೆರಳಿದ್ದ ಆನಂದ ಗ್ರಾಮದ ಕನಕಪ್ಪ ಅವರ ಜಮೀನಿನಲ್ಲಿನ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ರಸ್ತೆಯಲ್ಲಿ ತೆರಳುತ್ತಿದ್ದ ಯುವಕರು ಗಮನಿಸಿ ಕೆರೆಗೆ ಇಳಿದು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ ಸ್ವಲ್ಪ ಸಮಯದ ನಂತರ ಬಾಲಕನ ಮೃತ ದೇಹ ಸಿಕ್ಕಿದೆ. ಸ್ಥಳಕ್ಕೆ ಲಿಂಗಸುಗೂರಿನಿಂದ ಅಗ್ನಿ ಶಾಮಕ ಸಿಬ್ಬಂದಿ ಬರುವ ವೇಳಗೆ ಗ್ರಾಮಸ್ಥರು ಮೃತ ದೇಹವನ್ನು ಹೊರ ತೆಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT