ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದ ಈರುಳ್ಳಿ ದರ: ಏರಿದ ಬೆಂಡೆ ಬೆಲೆ

ಹೊರ ಜಿಲ್ಲೆಗಳ ತರಕಾರಿ ಅವಲಂಬಿಸಿದ ರಾಯಚೂರು ಮಾರುಕಟ್ಟೆ
ಚಂದ್ರಕಾಂತ ಮಸಾನಿ
Published 24 ಡಿಸೆಂಬರ್ 2023, 6:09 IST
Last Updated 24 ಡಿಸೆಂಬರ್ 2023, 6:09 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಚಳಿ ಇಲ್ಲದಿದ್ದರೂ ವಾತಾವರಣ ಸ್ವಲ್ಪಮಟ್ಟಿಗೆ ತಂಪಾಗಿದೆ. ಬಿಸಿಲು ಇನ್ನೂ ಗರಿಬಿಚ್ಚಿಕೊಂಡಿಲ್ಲ. ನೀರಾವರಿ ಪ್ರದೇಶಗಳಲ್ಲೂ ಮೆಣಸಿನಕಾಯಿ ಬಿಟ್ಟರೆ ಬೇರೆ ತರಕಾರಿ ಬೆಳೆಗಳನ್ನು ಬೆಳೆದಿಲ್ಲ. ಹೀಗಾಗಿ ಹೊರ ಜಿಲ್ಲೆಗಳ ತರಕಾರಿಯೇ ರಾಯಚೂರು ಮಾರುಕಟ್ಟೆಗೆ ಬರುತ್ತಿದೆ.

ಕಳೆದ ವಾರ ಪ್ರತಿ ಕೆ.ಜಿಗೆ ₹ 60 ಇದ್ದ ಈರುಳ್ಳಿ ಬೆಲೆ ಅರ್ಧಕ್ಕೆ ಇಳಿದಿದೆ. ನಿತ್ಯ ಅಡುಗೆಗೆ ಬೇಕಿರುವ ಈರುಳ್ಳಿ ಬೆಲೆ ಕಡಿಮೆಯಾಗಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಆದರೆ, ಬೆಳ್ಳುಳ್ಳಿಯ ಬೆಲೆ ಇಳಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೀಗಾಗಿ ಗ್ರಾಹಕರು ಈರುಳ್ಳಿ ಬಳಕೆಯನ್ನೂ ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದ್ದಾರೆ.

ಹಿರೇಕಾಯಿ ಬೆಲೆ ಮಾರುಕಟ್ಟೆಯಲ್ಲಿ ಈ ವಾರವೂ ಪ್ರಭಾವ ಉಳಿಸಿಕೊಂಡಿದೆ. ಬೆಂಡೆಕಾಯಿ, ತೊಂಡೆಕಾಯಿ ಹಾಗೂ ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ ಹಾಗೂ ಸೌತೆಕಾಯಿ ಸಹ ಹಿರೇಕಾಯಿಗೆ ಸರಿಸಾಟಿಯಾಗಿ ನಿಂತಿವೆ.

ತರಕಾರಿ ರಾಜ ಬದನೆಕಾಯಿ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಹೊಕೋಸು, ಗಜ್ಜರಿ, ಬೀಟ್‌ರೂಟ್, ಬೀನ್ಸ್, ಹಾಗಲಕಾಯಿ ಹಾಗೂ ಔರೆಕಾಯಿ ಮಾರುಕಟ್ಟೆಯಲ್ಲಿ ತರಕಾರಿ ರಾಜನಿಗೆ ಬೆಂಬಲವಾಗಿ ನಿಂತರೆ, ಆಲೂಗಡ್ಡೆ ಹಾಗೂ ಎಲೆಕೋಸು ಗ್ರಾಹಕರ ಹಿತಕಾಪಾಡಿವೆ.

ತೆಲಂಗಾಣದ ಜಿಲ್ಲೆಗಳಿಂದ ಹಿರೇಕಾಯಿ, ಗಜ್ಜರಿ, ಔರೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊ‍ಪ್ಪು, ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಹಾಗೂ ಗೆಣಸಿನಕಾಯಿ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

‘ಬೇಸಿಗೆ ಇನ್ನೂ ದೂರ ಇದೆ. ಆಗಲೇ ಕೆಲ ತರಕಾರಿಗಳ ಬೆಲೆ ಹೆಚ್ಚಾಗಿದೆ. ಬಿಸಿಲು ಹೆಚ್ಚಿದಂತೆ ತರಕಾರಿ ಬೆಲೆಯಲ್ಲೂ ಏರಿಕೆಯಾಗಲಿದೆ. ರಾಯಚೂರಿಗೆ ಸದ್ಯ ಹೊರ ಜಿಲ್ಲೆಗಳಿಂದಲೇ ಸೊಪ್ಪು ಬರುತ್ತಿದೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.

ತರಕಾರಿ;ಕಳೆದ ವಾರ;ಈ ವಾರ (ಪ್ರತಿ ಕೆ.ಜಿಗೆ ₹ಗಳಲ್ಲಿ)  ಈರುಳ್ಳಿ;40–60;20-30 ಬೆಳ್ಳುಳ್ಳಿ;280-300;280-300 ‌ಆಲೂಗಡ್ಡೆ;25-30;30-30 ಮೆಣಸಿನಕಾಯಿ;25–30;50-60 ಎಲೆಕೋಸು;50–60;40-40 ಹೂಕೋಸು;40-40;50-60 ಗಜ್ಜರಿ;40-40;55-60 ಬೀಟ್‌ರೂಟ್‌;55–60;60-60 ಬೀನ್ಸ್;40–40;55-60 ಟೊಮೆಟೊ;30–30;30–30 ಬದನೆಕಾಯಿ;35-40;55-60 ಹಿರೇಕಾಯಿ;60–80;70-80 ಬೆಂಡೆಕಾಯಿ;55-60;70-80 ತೊಂಡೆಕಾಯಿ;55-60;70-80 ಡೊಣಮೆಣಸಿನಕಾಯಿ;55–60;70-80 ತುಪ್ಪದ ಹಿರೇಕಾಯಿ;560–60;70-80 ಚವಳೆಕಾಯಿ;80–100;70-80 ಸೌತೆಕಾಯಿ;50-60;50-60 ಹಾಗಲಕಾಯಿ;50-60;50-60 ಔರೆಕಾಯಿ;50-60;50-60 ನುಗ್ಗೆಕಾಯಿ;₹70ಕ್ಕೆ 9 ನುಗ್ಗೆಕಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT