ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ | ಉತ್ಖನನಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಮಸ್ಕಿಯ ‘ಸುಳಿದಿಬ್ಬ’ದಲ್ಲಿ ಚೋಳರ ಕಾಲದ ಶಾಸನ
Published 24 ಫೆಬ್ರುವರಿ 2024, 5:53 IST
Last Updated 24 ಫೆಬ್ರುವರಿ 2024, 5:53 IST
ಅಕ್ಷರ ಗಾತ್ರ

ಮಸ್ಕಿ: ಸಾಮ್ರಾಟ್ ಅಶೋಕನ ಶಿಲಾಶಾಸನ ಪತ್ತೆಯಾದ 120 ವರ್ಷಗಳ ನಂತರ ಶಾಸನದ ಅನತಿ ದೂರದಲ್ಲಿರುವ ನಿಷೇಧಿತ ಪ್ರದೇಶ ‘ಸುಳಿದಿಬ್ಬ’ದ ಉತ್ಖನನಕ್ಕೆ ಇದೀಗ ತಮಿಳುನಾಡು ಸರ್ಕಾರ ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಪುರಾತತ್ವ ಇಲಾಖೆ ಅಧೀನದಲ್ಲಿರುವ ಪಟ್ಟಣದ ಮುದಗಲ್‌ ರಸ್ತೆಯಲ್ಲಿನ ‘ಸುಳಿದಿಬ್ಬ’ದಲ್ಲಿ ಈಚೆಗೆ ಚೋಳರ ಕಾಲದ ಶಾಸನ ಪತ್ತೆಯಾದ ನಂತರ ತಮಿಳುನಾಡು ಸರ್ಕಾರವು ಮಸ್ಕಿಯಲ್ಲಿ ಉತ್ಖನನ ನಡೆಸುವ ಮಹತ್ವದ ನಿರ್ಣಯ ಕೈಗೊಂಡು ಅದಕ್ಕೆ ಅಗತ್ವವಿರುವ ಹಣ ಮೀಸಲಿಟ್ಟಿದೆ.

‘ಚೋಳ ಅರಸರು ಮೂಲತಃ ತಮಿಳುನಾಡಿಗೆ ಸೇರಿದ್ದವರು. ಮಸ್ಕಿ ಹಳೆಯ ಊರು ಈಗಿನ ಹಳೆಯ ಕ್ಯಾತನಟ್ಟಿ ಎಂಬಲ್ಲಿ ಯುದ್ಧ ಮಾಡಿರಬಹುದು ಎಂಬ ಉಲ್ಲೇಖದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಉತ್ಖನನ ನಡೆಸಿ ಚೋಳ ಅರಸರ ಮೂಲ ಕಂಡು ಹಿಡಿಯುವುದು ತಮಿಳುನಾಡು ಸರ್ಕಾರದ ಮೂಲ ಉದ್ದೇಶವಾಗಿದೆ’ ಎಂದು ಇತಿಹಾಸ ತಜ್ಞ ಚನ್ನಬಸ್ಸಪ್ಪ ಮಲ್ಮಂದಿನ್ನಿ ಅಭಿಪ್ರಾಯಪಡುತ್ತಾರೆ.

‘ಕನ್ನಡ ನಾಡಿದ ಅರಸರೊಂದಿಗೆ ಪಲ್ಲವರು ಮತ್ತು ಚೋಳರು ನಿರಂತರವಾಗಿ ಯುದ್ಧ ಮಾಡಿದ ಸಾಕಷ್ಟು ವಿವರಗಳು ತಮಿಳು ಶಾಸನಗಳಲ್ಲಿ ದೊರೆಯುತ್ತದೆ. ‘ಸುಳಿ ದಿಬ್ಬ’ದಲ್ಲಿ ದೊರೆತ ಚೋಳರ ಕಾಲದ ಶಾಸನ ಇನ್ನಷ್ಟು ಪೂರಕ ಮಾಹಿತಿ ಒದಗಿಸಿದೆ’ ಎಂದು ಸಂಶೋಧಕ ಚನ್ನಬಸ್ಸಯ್ಯ ಹಿರೇಮಠ ಮಸ್ಕಿ ಹೇಳುತ್ತಾರೆ.

ಚೋಳರ ಶಾಸನ ದೊರೆತ ಸ್ಥಳದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಪುರಾತತ್ವ ಇಲಾಖೆ ತಜ್ಞರು ಜಂಟಿಯಾಗಿ ಉತ್ಖನನ ನಡೆಸಬೇಕು. ಜಂಟಿ ಅಧ್ಯಯನದಿಂದ ಇನ್ನಷ್ಟು ಅಂಶಗಳು ಹೊರ ಬರಲಿದೆ.
ಚನ್ನಬಸ್ಸಯ್ಯ ಹಿರೇಮಠ, ಇತಿಹಾಸ ಸಂಶೋಧಕ ರಾಯಚೂರು
ರಾಜ್ಯ ಪುರಾತತ್ವ ಇಲಾಖೆಗೆ ಹಲವಾರು ಭಾರಿ ಮನವಿ ಮಾಡಲಾಗಿದೆ. ಆದರೆ ತಮಿಳುನಾಡು ಸರ್ಕಾರ ಉತ್ಖನನಕ್ಕೆ ತೋರಿಸಿದ ಆಸಕ್ತಿಯನ್ನು ರಾಜ್ಯ ಸರ್ಕಾರ ತೋರಿಸುತ್ತಿಲ್ಲ.
ಚನ್ನಬಸ್ಸಪ್ಪ ಮಲ್ಕಂದಿನ್ನಿ, ಚೋಳರ ಶಾಸನ ಪತ್ತೆ ಮಾಡಿದ ಸಂಶೋಧಕ
ಸಂಶೋಧಕ ಚನ್ನಬಸ್ಸಪ್ಪ ಮಲ್ಕಂದಿನಿ ಅವರು ಮಸ್ಕಿಯ ಸುಳಿದಿಬ್ಬದಲ್ಲಿ ಪತ್ತೆ ಹಚ್ಚಿದ ಚೋಳರ ಶಾಸನ
ಸಂಶೋಧಕ ಚನ್ನಬಸ್ಸಪ್ಪ ಮಲ್ಕಂದಿನಿ ಅವರು ಮಸ್ಕಿಯ ಸುಳಿದಿಬ್ಬದಲ್ಲಿ ಪತ್ತೆ ಹಚ್ಚಿದ ಚೋಳರ ಶಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT