ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಅಪಘಾತ: ಮೂವರು ಹನುಮ ಮಾಲಾಧಾರಿಗಳ ಸಾವು

Published 23 ಏಪ್ರಿಲ್ 2024, 14:55 IST
Last Updated 23 ಏಪ್ರಿಲ್ 2024, 14:55 IST
ಅಕ್ಷರ ಗಾತ್ರ

ಶಕ್ತಿನಗರ (ರಾಯಚೂರು): ಹನುಮ ಜಯಂತಿ ಅಂಗವಾಗಿ ನೀರು ತರಲು ಕೃಷ್ಣಾ ನದಿಗೆ ಪಾದಯಾತ್ರೆ ತೆರಳಿ ಮರಳುವಾಗ ಮಂಗಳವಾರ ಹಿಂಬದಿಯಿದ ಬೊಲೆರೊ ವಾಹನ ಡಿಕ್ಕಿಯಾಗಿ ಮೂವರು ಹನುಮ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಶಕ್ತಿನಗರದ ಯಾದವ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. 

ರಾಯಚೂರು ತಾಲ್ಲೂಕಿನ ಹೆಗ್ಗಸನಹಳ್ಳಿ ಗ್ರಾಮದ ನಿವಾಸಿ ಅಯ್ಯನಗೌಡ (30), ಉದಯಕುಮಾರ (28) ಮತ್ತು ಮಹೇಶ (22) ಮೃತರು.

ಬೆಳಿಗ್ಗೆ ಹೆಗ್ಗಸನಹಳ್ಳಿ ಗ್ರಾಮದಿಂದ 10 ಜನ ಹನುಮ ಮಾಲಾಧಾರಿಗಳು ತೆರಳಿದ್ದರು. ನದಿಯಲ್ಲಿ ನೀರು ತುಂಬಿಕೊಡು ಮರಳುವಾಗ ಹೈದರಾಬಾದ್‌ನಿಂದ ಕೋಳಿ ಸಾಗಿಸುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ.  ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಶ
ಮಹೇಶ
ಉದಯಕುಮಾರ
ಉದಯಕುಮಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT