ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಎಫ್ಐಡಿ ಸಮಸ್ಯೆ ನಿವಾರಣೆಗೆ ಒತ್ತಾಯ

Published 24 ಮೇ 2024, 13:47 IST
Last Updated 24 ಮೇ 2024, 13:47 IST
ಅಕ್ಷರ ಗಾತ್ರ

ಮಾನ್ವಿ: ‘ರೈತರ ಎಫ್ಐಡಿ ಸಮಸ್ಯೆ ನಿವಾರಿಸಿ ಎಲ್ಲಾ ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ಹಣ ಪಾವತಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ತಹಶೀಲ್ದಾರ್ ಜಗದೀಶ್ ಚೌರ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರದಿಂದ ಬಿಡುಗಡೆಯಾದ ಬೆಳೆ ಹಾನಿ ಹಾಗೂ ಬರ ಪರಿಹಾರ ಹಣ ಎಲ್ಲಾ ರೈತರ ಖಾತೆಗಳಿಗೆ ಪಾವತಿಯಾಗಿಲ್ಲ. ಎಫ್ಐಡಿ ಸಮಸ್ಯೆ ನೆಪದಲ್ಲಿ ಹೆಚ್ಚಿನ ರೈತರು ಪರಿಹಾರದ ಹಣದಿಂದ ವಂಚಿತರಾಗಿದ್ದಾರೆ. ಈ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು. ಎಲ್ಲಾ ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ಹಣ ಪಾವತಿಸಬೇಕು’ ಎಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಾಜಾ ವಿಜಯಕುಮಾರ ನಾಯಕ, ಪದಾಧಿಕಾರಿಗಳಾದ ವೆಂಕೋಬ ಯಾದವ, ಆನಂದ ಗೌಡ, ಜಲಾಲ್ ಶಾಸ್ತ್ರಿ ಕ್ಯಾಂಪ್ , ವೀರೇಶ ಮಳ್ಳಿ , ಗುರುರಾಜ ಕುಲಕರ್ಣಿ ಹಿರೇಕೊಟ್ನೆಕಲ್, ರಮೇಶ, ಕುಮಾರ ಕಾತರಕಿ, ಹನುಮಂತ, ವೀರೇಶ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT