ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ: ಮತದಾನ ಜಾಗೃತಿ ವೇದಿಕೆಯಾದ ಮದುವೆ ಮಂಟಪ

Published 4 ಏಪ್ರಿಲ್ 2024, 14:14 IST
Last Updated 4 ಏಪ್ರಿಲ್ 2024, 14:14 IST
ಅಕ್ಷರ ಗಾತ್ರ

ಮಸ್ಕಿ: ನವಜೀವನಕ್ಕೆ ಕಾಲಿಟ್ಟಿದ್ದ ದಂಪತಿಗಳು ಮದುವೆ ಮಂಟಪದ ವೇದಿಕೆ ಮೇಲೆ ಮತದಾನ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಮತದಾನ ಜಾಗೃತಿ ಅಭಿಯಾನವನ್ನು ವಿಶೇಷವಾಗಿ ಆಚರಿಸಿದ ಘಟನೆ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಗುರುವಾರ ನಡೆಯಿತು.

ತಾಲ್ಲೂಕು ಪಂಚಾಯಿತಿ ಹಾಗೂ ಸ್ವೀಪ್‌ ಸಮಿತಿ ಸಿಬ್ಬಂದಿ ಮದುವೆ ಮಂಟಪಕ್ಕೆ ತೆರಳಿ ವೇದಿಕೆ ಮೇಲೆ ಇದ್ದ ನವದಂಪತಿಗಳಾದ ಶ್ರೀನಿವಾಸರಾವ್‌ ಮತ್ತು ವೇದಾಶ್ರೀ ಅವರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ನವ ವಧುವರರಿಗೆ ಶುಭ ಕೋರಲು ಬಂದಿದ್ದ ನೂರಾರು ಜನರಿಗೂ ಸಹ ಕಡ್ಡಾಯ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ತಾಲ್ಲೂಕು ಪಂಚಾಯಿತಿ ಮ್ಯಾನೇಜರ್‌ ಗಂಗಾಧರಮೂರ್ತಿ, ಚುನಾವಣೆ ಎಫ್‌ಎಸ್‌ಟಿ ತಂಡ ಕೆ. ಮಲ್ಲಯ್ಯ, ನವೀನಕುಮಾರ, ಚಂದ್ರಶೇಖರ ದಿನ್ನಿ, ಬಸವರಾಜ ಕಡಬೂರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT