ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬುಲನ್ಸ್‌ ದುರಸ್ತಿಗೆ ಮೀನಮೇಷ

Last Updated 29 ಏಪ್ರಿಲ್ 2017, 6:11 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಅರಕೇರಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ  ಮೂರು ಅಂಬುಲನ್ಸ್‌ಗಳು ಕೆಟ್ಟು ಸಂಚಾರ ನಿಲ್ಲಿಸಿವೆ. ಇಲಾಖೆ ಅಧಿಕಾರಿಗಳು ಮಾತ್ರ ಇತ್ತಕಡೆಗೆ ಗಮನ ಹರಿಸಿಲ್ಲ.

‘ರಾಷ್ಟ್ರೀಯ ತುರ್ತು ಸೇವಾ ಯೋಜನೆಯ ಅಡಿಯಲ್ಲಿ1,108 ಆಂಬುಲೆನ್ಸ್‌ 1ಮತ್ತು ಕೇಂದ್ರ ಹಾಗೂ ನಗು–ಮಗು ಯೋಜನೆಯ 1 ಆಂಬುಲನ್ಸ್‌ ಸೇರಿ ಒಟ್ಟು ಮೂರು ತುರ್ತು ಸೇವೆಯ ವಾಹನಗಳು ನಿರ್ವಹಣೆ ಇಲ್ಲದೆ ನಿಂತಲ್ಲೇ ತುಕ್ಕು ಹಿಡಿಯುತ್ತಿವೆ. ವರ್ಷಗಳೇ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ದುರಸ್ತಿಗೆ ಮುಂದಾಗಿಲ್ಲ’ ಎಂದು ಜನರು ದೂರಿದ್ದಾರೆ.

‘ತಾಲ್ಲೂಕು ಕೇಂದ್ರ 25ಕಿ.ಮೀ , ಸಿರವಾರ ಪಟ್ಟಣ 25ಕಿ.ಮೀ ದೂರ ಇದ್ದು, ತುರ್ತು ಸಂದರ್ಭದಲ್ಲಿ ಜಿಲ್ಲಾ ಕೇಂದ್ರಕ್ಕೆ ಹೋಗಲು 50ಕಿ.ಮೀ. ದೂರವನ್ನು ರೋಗಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.  ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗಲು ನಗು–ಮಗು ವಾಹನವನ್ನು ಟೈರ್‌ ಇಲ್ಲದ ಕಾರಣ ಬಳಕೆ ಮಾಡುತ್ತಿಲ್ಲ. ಇಲಾಖೆಯ ಅಧಿಕಾರಿಗಳು ದುರಸ್ತಿಗೆ ಕ್ರಮ ಜರುಗಿಸಿಲ್ಲ’ ಎಂಬುದು ಜನರ ಅಹವಾಲು.

‘ಶುಕ್ರವಾರ ಆಸ್ಪತ್ರೆಯಲ್ಲಿ ನಡೆದ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಅರಕೇರಾ  ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳಿಂದ ಬಾಣಂತಿಯರು ನವಜಾತ ಶಿಶುವಿನೊಂದಿಗೆ ಬಂದಿದ್ದರು.

ನಗು–ಮಗು ಅಂಬುಲನ್ಸ್‌ ಲಭ್ಯವಿ ಲ್ಲದ ಕಾರಣ ಶಸ್ತ್ರಚಿಕಿತ್ಸೆಯ ನಂತರ ಖಾಸಗಿ ವಾಹನಗಳಿಗೆ ಬಾಡಿಗೆ ನೀಡಿ  ತೆರಳಬೇಕಾಯಿತು. ಸುರಕ್ಷಾ ದೃಷ್ಟಿಯಿಂದ ನಗು–ಮಗು ವಾಹನವೇ ಸೂಕ್ತವಾಗಿದೆ’ ಎಂದು ಗ್ರಾಮಸ್ಥ ಯಲ್ಲಪ್ಪ ತಿಳಿಸಿದರು.

*

ಆಸ್ಪತ್ರೆಯ ಅಂಬುಲನ್ಸ್‌ಗಳನ್ನು ಕೂಡಲೇ ದುರಸ್ತಿಗೊಳಿಸಿ ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು.
–ಡಾ. ಬನದೇಶ್ವರ, ತಾಲ್ಲೂಕು ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT