ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ತಾಸು ಕಾರ್ಯಾಚರಣೆ: ಸಾವನದುರ್ಗ ಬೆಟ್ಟದ ಚಾರಣದಲ್ಲಿ ದಾರಿ ತಪ್ಪಿದ್ದ ಯುವಕ ಪತ್ತೆ

Published 24 ಅಕ್ಟೋಬರ್ 2023, 16:30 IST
Last Updated 24 ಅಕ್ಟೋಬರ್ 2023, 16:30 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಸಾವನದುರ್ಗದ ಬೆಟ್ಟದಲ್ಲಿ ಮಂಗಳವಾರ ಚಾರಣ ಕೈಗೊಂಡಿದ್ದಾಗ ದಾರಿ ತಪ್ಪಿ ಕಣ್ಮರೆಯಾಗಿದ್ದ ಯುವಕನೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಸತತ ಐದು ತಾಸು ಶೋಧ ಕಾರ್ಯಾಚರಣೆ ನಡೆಸಿ, ರಾತ್ರಿ 9.15ರ ಸುಮಾರಿಗೆ ಪತ್ತೆ ಹಚ್ಚಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಬಿಟಿಎಂ ಲೇಔಟ್‌ನ 26 ವರ್ಷದ ಕಾರ್ತಿಕ್‌ ಚಾರಣ ಸಂದರ್ಭದಲ್ಲಿ ದಾರಿ ತಪ್ಪಿದ ಯುವಕ. ಬೆಟ್ಟವನ್ನು ಸರಿಯಾದ ಮಾರ್ಗದಲ್ಲಿ ಹತ್ತಿದ್ದ ಕಾರ್ತಿಕ್, ಇಳಿಯುವಾಗ ಬೇರೆ ದಾರಿಯಲ್ಲಿ ಬಂದಿದ್ದಾರೆ. ಆಗ, ಕೆಳಕ್ಕೆ ಬರುವ ಹಾದಿ ಗೊತ್ತಾಗಿಲ್ಲ. ಕಡೆಗೆ, ಅವರು ತಮ್ಮ ಮೊಬೈಲ್‌ ಫೋನ್‌ನಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.

ಪೊಲೀಸರು ತಕ್ಷಣ ಅರಣ್ಯ ಇಲಾಖೆಯವರ ಗಮನಕ್ಕೆ ತಂದು, ಯುವಕನ ಶೋಧ ಕಾರ್ಯಕ್ಕೆ ಜಂಟಿ ಕಾರ್ಯಾಚರಣೆ ಕೈಗೊಂಡರು. ಯುವಕನಿಂದ ಕರೆ ಬಂದ ಮೊಬೈಲ್ ಸಂಖ್ಯೆಯ ಟವರ್ ಲೋಕೇಷನ್ ಜಾಡು ಹಿಡಿದು ತಂಡವಾಗಿ ಬೆಟ್ಟದ ಅರಣ್ಯದ ತಪ್ಪಲಿನ ಅರಣ್ಯ ಭಾಗದಲ್ಲಿ ಹುಡುಕಾಟ ನಡೆಸಿದರು.

ವಾಪಸ್ ಯುವಕನಿಗೆ ಕರೆ ಮಾಡಿದರೆ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಿಗುತ್ತಿರಲಿಲ್ಲ. ಆದರೂ, ಮೊದಲಿಗೆ ಸಿಕ್ಕ ಟವರ್ ಲೋಕೇಷನ್ ಆಧರಿಸಿ ಹುಡುಕಾಟ ಆರಂಭಿಸಿದರು. ಸಂಜೆ ಸುಮಾರು 7 ಗಂಟೆಯಾದ ಪತ್ತೆಯಾಗಲಿಲ್ಲ. ಕತ್ತಲೆಯಾಗುತ್ತಿದ್ದಂತೆ ಸಿಬ್ಬಂದಿ ಟಾರ್ಚ್‌ಗಳೊಂದಿಗೆ ಬೆಟ್ಟ ಹತ್ತಿ, ಅಕ್ಕಪಕ್ಕದಲ್ಲೆಲ್ಲಾ ಹುಡುಕಾಡಿದರು. ಕಡೆಗೆ ಅರಣ್ಯದ ಕಡೆಗಿರುವ ಬೆಟ್ಟದ ಪಾದ ಮೆಟ್ಟಿಲು ಬಳಿ ಕಿರಿದಾದ ಬಂಡೆಯ ಇಕ್ಕಲಿನಲ್ಲಿ ಸಿಲುಕಿದ್ದ ಕಾರ್ತಿಕ್  ಅವರನ್ನು ಪತ್ತೆ ಹಚ್ಚಿದರು.

ಶೋಧ ಕಾರ್ಯಾಚರಣೆಯಲ್ಲಿ ಎಎಸ್‌ಐ ಕೃಷ್ಣಪ್ಪ, ಹೆಡ್ ಕಾನ್‌ಸ್ಟೆಬಲ್‌ಗಳಾದ ಮುತ್ತುರಾಜು, ಕುಮಾರ ಸ್ವಾಮಿ, ದಯಾನಂದ್‌, ಹೂವಣ್ಣ, ಜಂಬಣ್ಣ, ರವಿಕುಮಾರ್‌, ಶ್ರೀನಿವಾಸ್‌, ಅರಣ್ಯ ರಕ್ಷಕ ಗಂಗರಾಜು ಹಾಗೂ ಇತರರು ಇದ್ದರು. ಸಿಬ್ಬಂದಿಗೆ ಸ್ಥಳೀಯರು ಸಹ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT