ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲೆ ಮುಂದಿನ ಪೀಳಿಗೆಗೆ ಉಳಿಸಿ: ಮುಖ್ಯಶಿಕ್ಷಕ ಎಂ.ಜೆ.ನಾಗರಾಜು

ಉಳಿಸಿ
Published 7 ಡಿಸೆಂಬರ್ 2023, 6:55 IST
Last Updated 7 ಡಿಸೆಂಬರ್ 2023, 6:55 IST
ಅಕ್ಷರ ಗಾತ್ರ

ಚನ್ನಪಟ್ಟಣ: ಜಾನಪದ ಕಲೆ ಹಾಳಾಗದಂತೆ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಬೇಕು ಎಂದು ಕೋಡಂಬಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಂ.ಜೆ.ನಾಗರಾಜು ಕಿವಿಮಾತು ಹೇಳಿದರು.

ತಾಲ್ಲೂಕಿನ ಕೋಡಂಬಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಿನಪುರ ಆರ್ಕಿಟೆಕ್ ಆಫ್ ಕಾನ್ ಸ್ಟಿಟ್ಯೂಷನ್ ಡಾ.ಬಿ.ಆರ್.ಅಂಬೇಡ್ಕರ್ ಕಲ್ಚರಲ್ ಸೋಸಿಯಲ್ ಅಂಡ್ ಎಜುಕೇಷನಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಜಾನಪದ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಜಾನಪದ ಕಲೆಯಿಂದಲೇ ಬದುಕು ಬೆಳಕಾಗುತ್ತಿದೆ. ಕಲೆಯಿಂದಲೇ ನಾವೆಲ್ಲ ಬದುಕುತ್ತಿದ್ದೇವೆ. ಪೂರ್ವಿಕರು ಕಟ್ಟಿ ಬೆಳೆಸಿದ ಜಾನಪದ ಕಲೆ ನಾಶವಾಗದಂತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಸರ್ಕಾರ ಹಾಗೂ ಸಂಘ–ಸಂಸ್ಥೆಗಳು ಜಾನಪದ ಕಲೆ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು’ ಎಂದರು.

ಟ್ರಸ್ಟ್ ಕಾರ್ಯದರ್ಶಿ ಗುರುವಿನಪುರ ಬಸವರಾಜು ಮಾತನಾಡಿದರು. ಶಿಕ್ಷಕರಾದ ರಾಜೇಶ್ವರಿ, ಶಾಲಿನಿ, ಲಕ್ಷ್ಮಿಪತಿ, ಮಂಗಳಗೌರಿ, ಶ್ವೇತ, ಶೃತಿ, ಸರೋಜ, ಪದ್ಮಾವತಿ, ಶಶಿಕುಮಾರ್, ಗಾಯಕರಾದ ನಮನ ಶಿವಕುಮಾರ, ಜಯಸಿಂಹ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರೈತಗೀತೆ, ನಾಡಗೀತೆ, ರಂಗಗೀತೆ, ತತ್ವಪದ, ಹೋರಾಟಗೀತೆ, ಲಾವಣಿ ಪದ, ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. ಸೋಬಾನೆ ಹಾಡುಗಾರರಾದ ಮಂಜಮ್ಮ, ಕಾಳಮ್ಮ ತಂಡ ಸೋಬಾನೆ ಗಾಯನ ನಡೆಸಿಕೊಟ್ಟರು. ನಂತರ ನಡೆದ ಕವಿಗೊಷ್ಠಿಯಲ್ಲಿ ಶಾಲಿನಿ, ಮಂಜುಳ, ರಾಜೇಶ್ವರಿ, ಬಸವರಾಜು, ಜಿ.ಎಚ್.ಮಂಗಳಗೌರಿ, ಸರೋಜ ಭಾಗವಹಿಸಿ ಕವನ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT