ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ಅವಸರದಮ್ಮ ಜಾತ್ರಾ ಮಹೋತ್ಸವ

Published 23 ಏಪ್ರಿಲ್ 2024, 5:52 IST
Last Updated 23 ಏಪ್ರಿಲ್ 2024, 5:52 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ತಾಳಕುಪ್ಪೆ–ಚಿನ್ನೇಗೌಡನದೊಡ್ಡಿ ಗ್ರಾಮದ ಬಳಿ ಇರುವ ಅವಸರದಮ್ಮ(ಪಾರ್ವತಿ ದೇವಿ), ಮುತ್ತುರಾಯ ಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿಯ ಜಾತ್ರೆ, ರಥೋತ್ಸವ ಹಾಗೂ ಅಗ್ನಿಕೊಂಡ ಮಹೋತ್ಸವ ಸೋಮವಾರ ಅದ್ಧೂರಿಯಾಗಿ ಜರುಗಿತು. ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ದೇವಿಯನ್ನು ದರ್ಶನ ಪಡೆದು ಪುನೀತರಾದರು.

ಬೆಳಿಗ್ಗೆ 9.10ಕ್ಕೆ ದೇವಾಲಯದ ಅರ್ಚಕ ಬಸವರಾಜು ಅವರು ಭಕ್ತರ ಹರ್ಷೋದ್ಗಾರದೊಂದಿಗೆ ಬಸವೇಶ್ವರ ಅಗ್ನಿಕೊಂಡ ಪ್ರವೇಶಿಸಿದರು. ಬಿದಿರಿನಿಂದ ತಯಾರಿಸಿದ ಬುಟ್ಟಿಯಲ್ಲಿ ನಾನಾ ಪುಷ್ಪಗಳು ಹಾಗೂ ಹೊಂಬಾಳೆಯಿಂದ ಆಕರ್ಷಕವಾಗಿ ಅಲಂಕರಿಸಿದ ಆರತಿಗಳನ್ನು ಭಕ್ತರು ದೇವಿಗೆ ಅರ್ಪಿಸಿದರು. ದೇಗುಲದ ಮುಂಭಾಗದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಬಸವೇಶ್ವರಸ್ವಾಮಿ, ಅವಸರದಮ್ಮ ಹಾಗೂ ಮುತ್ತುರಾಯಸ್ವಾಮಿ ದೇವರುಗಳ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು.

ಪೂಜಾ ಕಾರ್ಯಗಳು ಮುಗಿದ ಬಳಿಕ, ತಮಟೆ ವಾದ್ಯ ಮತ್ತು ಆರತಿಗಳೊಂದಿಗೆ ದೇವರುಗಳ ಮೂರ್ತಿಯನ್ನು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ ಹರಕೆ ಹೊತ್ತ ಭಕ್ತರ ಮುಡಿ ತಗೆಯುವ ಕಾರ್ಯ ನಡೆಯಿತು. ಬಸವೇಶ್ವರ, ಮುತ್ತುರಾಯ ಹಾಗೂ ಅವರಸದಮ್ಮ ದೇವಿಯ ಉತ್ಸವ ಮೂರ್ತಿಗಳ ರಥೋತ್ಸವ ಗ್ರಾಮದಲ್ಲಿ ಜರುಗಿತು. ಜಾತ್ರೆ ಪ್ರಯುಕ್ತ ಭಕ್ತರಿಗೆ ಸ್ಥಳೀಯರು ಪಾನಕ, ಮಜ್ಜಿಗೆ ಮತ್ತು ಪ್ರಸಾದ ವ್ಯವಸ್ಥೆ ಮಾಡಿದ್ದರು.

ಜಾತ್ರೆ ಪ್ರಯುಕ್ತ ಮುತ್ತುರಾಯಸ್ವಾಮಿ ದೇವರ ಅನ್ನಸಂತರ್ಪಣೆಯೊಂದಿಗೆ ಅಗ್ನಿಕೊಂಡ ತೆಗೆಯುವ ಕಾರ್ಯಕ್ಕೆ ಮೂರು ದಿನದ ಹಿಂದೆಯೇ ವಿದ್ಯುಕ್ತವಾಗಿ ಚಾಲನೆ ಸಿಕ್ಕಿತ್ತು. ಮಾರನೆಯ ದಿನ ಅವಸರದಮ್ಮ ದೇವಾಲಯದಲ್ಲಿ ಹೋಮ, ಅಭಿಷೇಕ, ಕಳಸ ಸ್ಥಾಪನೆ ಹಾಗೂ ದೇವಿಗೆ ವಿಶೇಷ ಅಲಂಕಾರ ಕೈಂಕರ್ಯಗಳು ನಡೆದವು. ಮಂಗಳವಾರ ರಾತ್ರಿ 10 ಗಂಟೆಗೆ ನಡೆಯುವ ಅಮ್ಮನವರ ಮರು ಪೂಜೆಯೊಂದಿಗೆ 4 ದಿನಗಳ ಜಾತ್ರೆ ಅಂತ್ಯಗೊಳ್ಳಲಿದೆ.

ಜಾತ್ರೆ ಪ್ರಯುಕ್ತ ಅವಸರದಮ್ಮ ದೇವಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು
ಜಾತ್ರೆ ಪ್ರಯುಕ್ತ ಅವಸರದಮ್ಮ ದೇವಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT