ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ಜೀತ ಕಾರ್ಮಿಕರ ರಕ್ಷಣೆ; ಪರಿಹಾರ ವಿತರಣೆ

Last Updated 15 ಸೆಪ್ಟೆಂಬರ್ 2018, 13:44 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಟಿಪ್ಪುನಗರ, ಯಾರಬ್ ನಗರ, ಗೆಜ್ಜಲ ಗುಡ್ಡೆ ಸೇರಿದಂತೆ, ಗುಜರಿ, ವೇಸ್ಟೆಜ್ ಗೋಡನ್ ಗಳ ಮೇಲೆ ದಾಳಿ ನಡೆಸಿ 19 ಮಂದಿ ಜೀತ ಕಾರ್ಮಿಕರನ್ನು ವಶಕ್ಕೆ ಪಡೆಯಲಾಗಿತ್ತು.

ಈ ಕಾರ್ಮಿಕರೆಲ್ಲರೂ ಬಿಹಾರ ಮೂಲದವರಾಗಿದ್ದು, ಜೀತ ವಿಮುಕ್ತಿಗೊಂಡ ಪ್ರತಿಯೊಬ್ಬರಿಗೂ ಜೀತ ಪದ್ದತಿ ನಿಷೇಧ ನಿಯಮಾವಳಿಗಳ ಅನ್ವಯ ₨20 ಸಾವಿರ ಪರಿಹಾರದ ಚೆಕ್‍ ಅನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ ಶನಿವಾರ ವಿತರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆಯ ಸಮನ್ವಯದಲ್ಲಿ ವಶಕ್ಕೆ ಪಡೆದ 19 ಜನ ಜೀತ ವಿಮುಕ್ತ ಕಾರ್ಮಿಕರನ್ನು ಅವರ ಸ್ವಂತ ಸ್ಥಳಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕ್ಯಾಪ್ಟನ್ ಕೆ.ರಾಜೇಂದ್ರ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್. ಪ್ರಶಾಂತ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್. ಹೇಮಾವತಿ, ಮಕ್ಕಳ ರಕ್ಷಣಾಧಿಕಾರಿ ತಾಜುದ್ದೀನ್ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT