ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವರಾಜ ಹೊರಟ್ಟಿ ಹೊಂಗನೂರು ಶಾಲೆಗೆ ಭೇಟಿ

Published 30 ಮೇ 2024, 7:17 IST
Last Updated 30 ಮೇ 2024, 7:17 IST
ಅಕ್ಷರ ಗಾತ್ರ

ಚನ್ನಪಟ್ಟಣ: ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಬುಧವಾರ ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಡಾ.ಎಚ್.ಎಂ.ವೆಂಕಟಪ್ಪ ಅವರು ನಿರ್ಮಿಸುತ್ತಿರುವ ಹೈಟೆಕ್ ಶಾಲೆಗೆ ಭೇಟಿ ನೀಡಿ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದರು.

ಕಣ್ವ ಡಯಾಗ್ನೋಸ್ಟಿಕ್ ಸೆಂಟರ್‌ನ ಡಾ.ಎಚ್.ಎಂ.ವೆಂಕಟಪ್ಪ ಅವರು ತಮ್ಮ ಹುಟ್ಟೂರು ಹೊಂಗನೂರು ಗ್ರಾಮದಲ್ಲಿ ತಮ್ಮ ಕಣ್ವ ಫೌಂಡೇಶನ್ ಮೂಲಕ ₹18 ಕೋಟಿ ವೆಚ್ಚದಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾಭ್ಯಾಸ ನೀಡಬಲ್ಲ ಹೈಟೆಕ್ ಶಾಲೆ ನಿರ್ಮಾಣ ಮಾಡುತ್ತಿದ್ದು, ಕಟ್ಟಡದ ಪ್ರಗತಿಯನ್ನು ಬಸವರಾಜ ಹೊರಟ್ಟಿ ಪರಿಶೀಲಿಸಿದರು.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶಾಲಾ ಕಟ್ಟಡ ನಿರ್ಮಿಸುತ್ತಿರುವ ವೈದ್ಯ ವೆಂಕಟಪ್ಪ ಅವರ ಕಾರ್ಯ ಶ್ಲಾಘನೀಯ. ತಾವು ವ್ಯಾಸಂಗ ಮಾಡಿದ ಶಾಲೆಯನ್ನು ಅತ್ಯಾಧುನಿಕವಾಗಿ ನಿರ್ಮಾಣ ಮಾಡುವ ಕೆಲಸ ನಿಜಕ್ಕೂ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಯೊಂದು ತಾಲ್ಲೂಕಿನಲ್ಲಿಯೂ ಇಂತಹ ಒಂದು ಮಾದರಿಯಾದ ಸರ್ಕಾರಿ ಶಾಲೆ ನಿರ್ಮಾಣಗೊಳ್ಳಬೇಕು. ಸರ್ಕಾರೇತರ ಸಂಸ್ಥೆಗಳು, ದಾನಿಗಳು, ಸಮಾಜ ಸೇವಕರು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಜೋಡಿಸಬೇಕು ಎಂದರು.

ಕಣ್ವ ಡಯಾಗ್ನೋಸ್ಟಿಕ್ ಸೆಂಟರ್‌ನ ಡಾ.ಎಚ್.ಎಂ.ವೆಂಕಟಪ್ಪ, ಶಿಕ್ಷಣ ಇಲಾಖೆ ರಾಮನಗರ ಜಿಲ್ಲಾ ಉಪ ನಿರ್ದೇಶಕ ಪುರುಷೋತ್ತಮ್, ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ, ಬಿಆರ್‌ಸಿ ಕುಸುಮಲತಾ, ಕಂದಾಯ ಇಲಾಖೆಯ ಶಿರಸ್ತೇದಾರ್ ಸೋಮೇಶ್, ಕಂದಾಯ ನಿರೀಕ್ಷಕ ಶ್ರೀಧರ್, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಶಾಲೆಯ ಮುಖ್ಯಶಿಕ್ಷಕ ಎಸ್.ಎಂ.ನಾಗೇಶ್, ಚಿಕ್ಕರಾಜು, ಕೃಷ್ಣ ಕುಮಾರ್, ವಿಷಕಂಠಯ್ಯ, ಸುರೇಶ್, ಸಂಗಯ್ಯ ಹಿರೇಮಠ್, ದಿನೇಶ್, ಸುಕನ್ಯಾ, ಸಲೀಮಾ ಬಾನು, ರಮ್ಯಾ, ಸವಿತಾ, ಪವಿತ್ರ, ಸುಮಾ, ಉಷಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT