ಶನಿವಾರ, ಮಾರ್ಚ್ 25, 2023
22 °C

ಭೈರವನದುರ್ಗ: 66 ಅಡಿ ಉದ್ದದ ಕನ್ನಡ ಧ್ವಜ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುದೂರು (ಮಾಗಡಿ): ಗ್ರಾಮದ ಭೈರವನದುರ್ಗದ ತುತ್ತತುದಿಯಲ್ಲಿ 66 ಅಡಿ ಉದ್ದದ ಕನ್ನಡ ಬಾವುಟ ಹಾರಿಸಿ 14ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಡಾ.ರಾಜ್ ಕುಮಾರ್ ಅಭಿಮಾನಿ ಬಳಗದವರು ಕನ್ನಡ ಪ್ರೇಮ ಮೆರೆದರು.

ಕಾರ್ಯಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಉಮೇಶ್‌ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಎ.ಪಿ. ಕುಮಾರ್‌ ಭೈರವನದುರ್ಗದಲ್ಲಿ ಸಸಿ ಬೆಟ್ಟು ಚಾಲನೆ ನೀಡಿದರು.

ಇತಿಹಾಸವುಳ್ಳ ಕುದೂರು ಭೈರವನದುರ್ಗದ ತುದಿಯಲ್ಲಿ 66 ಅಡಿ ಉದ್ದದ ಕನ್ನಡ ಧ್ವಜ ಹಾರಾಡುವುದನ್ನು ನೋಡುವುದೇ ಆನಂದದಾಯಕವಾಗಿದೆ ಎಂದು ಉಮೇಶ್ ತಿಳಿಸಿದರು. 

ಡಾ.ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಎಚ್. ನಾಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭ್ಯಾಗ್ಯಮ್ಮ, ಸದಸ್ಯರಾದ ಅನಂತನಾರಾಯಣ, ಸುರೇಶ್, ಸಾಧು, ಕಿರಣ್, ಗೋವಿಂದ, ಚಂದ್ರಶೇಖರ್, ಕೆಂಪಾಚಾರಿ, ಶರತ್‌, ಸಾಹಿತಿ ಮಹೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.