ಕನಕಪುರ: ಸಮಾಜದ ಎಲ್ಲ ಕಟ್ಟುಪಾಡು ಧಿಕ್ಕರಿಸಿ ಜ್ಞಾನ ಸಂಪಾದಿಸುವ ಶಿಕ್ಷಣದ ಕ್ರಾಂತಿಗೆ ಬುನಾದಿ ಹಾಕಿ ಕೊಟ್ಟ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಆಚರಣೆ ಅರ್ಥಪೂರ್ಣ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನ ನಾಥೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಭಾರತ ಇಂದು ಶೇ83ರಷ್ಟು ಶಿಕ್ಷಣ ಪಡೆದಿದೆ ಎಂದರೆ ಇದಕ್ಕೆ ಯಾರು ಕಾರಣ ಎಂದು ನಾವು ಅವಲೋಕನ ಮಾಡಬೇಕಿದೆ. ಸಾವಿತ್ರಿಬಾಯಿ ಫುಲೆ ಅವರ ಶ್ರಮದಿಂದ ಸಮಾಜದ ಎಲ್ಲ ವರ್ಗದ ಜನರು ಶಿಕ್ಷಣ ಪಡೆದಿದ್ದಾರೆ. ಅವರ ಜಯಂತಿ ಆಚರಣೆ ಮಾಡುತ್ತಿರುವುದು ಬಹಳ ಸಮಂಜಸವಾಗಿದೆ. ಇಂದಿನ ಯುವ ಪೀಳಿಗೆಗೆ ಅವರ ವಿಚಾರಧಾರೆ ತಿಳಿಸಬೇಕಾಗಿದೆ ಎಂದರು.

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಈ ನೆಲದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಮೇರು ವ್ಯಕ್ತಿಗಳ ಜಯಂತಿ ಆಚರಣೆ ಮಾಡದೆ ಕೈ ಬಿಡಲಾಗಿದೆ. ಸಾಮ್ರಾಟ್ ಅಶೋಕ, ಕೇರಳದ ನಾರಾಯಣ ಗುರು, ಶಿಕ್ಷಣದ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬಗಳ ಆಚರಣೆ ಪಟ್ಟಿಯಲ್ಲಿ ಸೇರಿಸಿ ಆಚರಣೆಗೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಭಾರತ ರತ್ನ ಪ್ರಶಸ್ತಿ ಕೆಲವು ರಾಜಕೀಯ ಪಕ್ಷಗಳ ನಾಯಕರಿಗೆ ಸೀಮಿತವಾಗಿದೆ. ಈ ಶ್ರೇಷ್ಠ ನಾಗರಿಕ ಪುರಸ್ಕಾರ ಸಮಾಜದ ಕ್ರಾಂತಿಗೆ ಅವಿಸ್ಮರಣೀಯ ಕೊಡುಗೆ ನೀಡಿದ ಫುಲೆ ದಂಪತಿಗೆ ಭಾರತ ಸರ್ಕಾರ ನೀಡಬೇಕು. ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನ ಜನವರಿ 3 ಅನ್ನು ರಾಷ್ಟ್ರೀಯ ಶಿಕ್ಷಕಿ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಹಲವು ಮಹನೀಯರ ಸಾಹಿತ್ಯ ರಚಿತ ಅಕ್ಷರಧಮ್ಮ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ಸಾಧಕರಿಗೆ ಸನ್ಮಾನ, ಕಬಡ್ಡಿ ಕ್ರೀಡೆ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಭವ್ಯ ಮೆರವಣಿಗೆ: ಕಾರ್ಯಕ್ರಮದ ಅಂಗವಾಗಿ ಅಯ್ಯಪ್ಪಸ್ವಾಮಿ ದೇವಾಲಯದಿಂದ ಅಂಬೇಡ್ಕರ್ ಭವನದ ವರೆಗೆ ಕಲಾತಂಡಗಳೊಂದಿಗೆ ಫುಲೆ ದಂಪತಿ ಭಾವಚಿತ್ರ ಮೆರವಣಿಗೆ ನಡೆಯಿತು.

ಬೆಂಗಳೂರಿನ ಮಹಾ ಬೋಧಿ ಸಂಸ್ಥೆ ಆನಂದ ಬಂತೇಜಿ, ಹೃದ್ರೋಗ ತಜ್ಞ ಡಾ.ಬಿ.ಸಿ.ಬೊಮ್ಮಯ್ಯ, ಪ್ರೊ ನಂಜರಾಜ ಅರಸ್, ಡಾ. ತೇಜೋವತಿ, ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜು, ಭಾರತೀಯ ನಾಗರಿಕ ಸಮಾನತೆ ಹೋರಾಟ ಸಮಿತಿ ಕಾರ್ಯದರ್ಶಿ ಕೆ.ಆರ್.ಸುರೇಶ್, ರೈತ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್, ಯುವಶಕ್ತಿ ವೇದಿಕೆ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.