ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮೂರು ನಮ್ಮ ಕೆರೆ’ಗೆ ಚಾಲನೆ

Last Updated 22 ಸೆಪ್ಟೆಂಬರ್ 2021, 4:35 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಸೋಲೂರು ವಲಯದ ಗೊರೂರು ಗ್ರಾಮದ ವ್ಯಾಪ್ತಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನಾ ಸಭೆ
ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ್ ಪಿ. ಮಾತನಾಡಿ, ನೀರಿನ ಅಭಾವದ ಈ ಕಾಲದಲ್ಲಿ ಪೂಜ್ಯರು ಇಂತಹ ಸಮಾಜಮುಖಿ ಕಾರ್ಯವನ್ನು ಸ್ಥಳೀಯ ಜನರ ಸಹಕಾರದೊಂದಿಗೆ ನಡೆಸುತ್ತಿದ್ದಾರೆ. ಈವರೆಗೆ ಸುಮಾರು 350 ಕೆರೆಗಳ ಹೂಳು ತೆಗೆದು ಅಭಿವೃದ್ಧಿಪಡಿಸಲಾಗಿದೆ. ಬುಡ್ಡನಪಾಳ್ಯ ಕೆರೆಯನ್ನು 2021-2022ನೇ ಸಾಲಿನ ಕೆರೆ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ ಎಂದರು.

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಮೋಹನ್‌ ಕುಮಾರ್‌ ಜಿ., ಉಪಾಧ್ಯಕ್ಷರಾಗಿ ಶ್ರೀನಿವಾಸ್‌ ಗೌಡ ಜಿ.ಎಲ್., ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ಎ., ಬಸವರಾಜು, ಕೋಶಾಧಿಕಾರಿಯಾಗಿ ಶಶಿಕುಮಾರ್ ಹಾಗೂ ಸಮಿತಿಯ ಸದಸ್ಯರನ್ನಾಗಿ ನಾಗರಾಜು ಸಿ.ಕೆ., ರಾಜಣ್ಣ, ಗೋವಿಂದಪ್ಪ, ಸುಮಿತ್ರಮ್ಮ, ಶಾರದಮ್ಮ, ಬೈಲಮ್ಮ, ಮುತ್ತಮ್ಮ, ನರಸಿಂಹಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಶ್ರೀನಿವಾಸ್ ಗೌಡ ಜಿ.ಎಲ್., ಗ್ರಾಮ ಪಂಚಾಯಿತಿ
ಅಧ್ಯಕ್ಷೆ ವಿಜಯಲಕ್ಷ್ಮಮ್ಮ, ಅಭಿವೃದ್ಧಿ ಅಧಿಕಾರಿ ಬಿ. ಸೈಯದ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT