ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೆ ನಿತ್ರಾಣಗೊಂಡಿದ್ದ ಆನೆ ರಕ್ಷಣೆ

Published 6 ಏಪ್ರಿಲ್ 2024, 6:01 IST
Last Updated 6 ಏಪ್ರಿಲ್ 2024, 6:01 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಸಮೀಪದ ಬೆಟ್ಟಹಳ್ಳಿ ವಾಡೆ ಗ್ರಾಮದ ಬಳಿ ರೈತರೊಬ್ಬರ ಜಮೀನಿನಲ್ಲಿ ನೀರಿಲ್ಲದೆ ನಿತ್ರಾಣಗೊಂಡು ಕುಸಿದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ರಕ್ಷಣೆ ಮಾಡಿದ್ದಾರೆ. ಆಹಾರ ಅರಿಸಿಕೊಂಡು ಬಂದಿದ್ದ ಗಂಡಾನೆಯು ಗ್ರಾಮದ ಚನ್ನೇಗೌಡ ಅವರ ಜಮೀನಿನಲ್ಲಿ ಸಿಲುಕಿತ್ತು.

ಸ್ಥಳೀಯರಿಂದ ವಿಷಯ ಗೊತ್ತಾಗುತ್ತಿದ್ದಂತೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ, ಜಮೀನಿನಲ್ಲಿ ನಿರ್ಮಿಸಿದ್ದ ನೀರಿನ ಗುಂಡಿಗೆ ಇಳಿಯುವಾಗ ಆನೆ ಕುಸಿದು ಬಿದ್ದಿತ್ತು. ನಂತರ ಆನೆಗೆ ನೀರು ಮತ್ತು ಆಹಾರ ಕೊಟ್ಟು ಶುಶ್ರೂಷೆ ನಡೆಸಿದ ‌ಬಳಿಕ ಚೇತರಿಸಿಕೊಂಡಿದೆ ಎಂದು ಡಿಸಿಎಫ್ ರಾಮಕೃಷ್ಣಪ್ಪ ಎಂ.ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿಎಸಿಎಫ್‌ ಗಣೇಶ್, ನಿಜಾಮುದ್ದೀನ್, ಆರ್‌ಎಫ್‌ಒ ದಾಳೇಶ್, ರಾಜಶೇಖರ್, ಅರಣ್ಯ ಪಾಲಕರಾದ ಚಂದ್ರು, ನರಸಿಂಹ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT