ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಗೆ ಶಕ್ತಿ ತುಂಬಿ ಸಂಸತ್ತಿಗೆ ಕಳಿಸಿ ಕೊಡಿ: ಡಾ. ಮಂಜುನಾಥ್ ಪತ್ನಿ ಅನುಸೂಯ

Published 4 ಏಪ್ರಿಲ್ 2024, 7:10 IST
Last Updated 4 ಏಪ್ರಿಲ್ 2024, 7:10 IST
ಅಕ್ಷರ ಗಾತ್ರ

ರಾಮನಗರ: ವೈದ್ಯಕೀಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಪತಿ ಡಾ. ಸಿ.ಎನ್. ಮಂಜುನಾಥ್ ಅವರು, ಇದೀಗ ರಾಜಕೀಯದ ಮೂಲಕ ಜನಸೇವೆಗೆ ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು ಅವರಿಗೆ ಶಕ್ತಿ ತುಂಬಿ ಸಂಸತ್ತಿಗೆ ಕಳಿಸಿ ಕೊಡಬೇಕು ಎಂದು ಪತ್ನಿ ಎಚ್.ಡಿ. ಅನುಸೂಯ ಅವರು ಮನವಿ ಮಾಡಿದರು.

ನಾಮಪತ್ರ ಸಲ್ಲಿಕೆಗೆ ಮುಂಚೆ ನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಪತಿಯೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿ ಅವರು ಸಲ್ಲಿಸಿರುವ ಸೇವೆ ಅನನ್ಯವಾದದು. ಇದೀಗ ರಾಜಕೀಯದಲ್ಲಿ ಸಹ ಸೇವೆಗೆ ಬಂದಿದ್ದಾರೆ. ಜನರು ಅವರನ್ನು ಬೆಂಬಲಿಸಿ ಮತ ಹಾಕಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT