ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಕಾರ್ಯಕರ್ತರ ಬಲ: ಟಿ.ಪಿ. ಪುಟ್ಟಸಿದ್ದೇಗೌಡ

Published 8 ಮೇ 2024, 5:04 IST
Last Updated 8 ಮೇ 2024, 5:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಆರೋಪದ ವಿಚಾರದಲ್ಲಿ ಜೆಡಿಎಸ್ ಪಕ್ಷದ ನಾಯಕರು ಯಾವುದೇ ಮುಜುಗರ ಅನುಭವಿಸುವುದು ಬೇಡ, ದೇವೇಗೌಡರ ಕುಟುಂಬದ ಜೊತೆ ಕಾರ್ಯಕರ್ತರಾದ ನಾವು ಇದ್ದೇವೆ’ ಎಂದು ತಾಲ್ಲೂಕು ಜೆಡಿಎಸ್ ಹಿರಿಯ ಮುಖಂಡ ಟಿ.ಪಿ. ಪುಟ್ಟಸಿದ್ದೇಗೌಡ ಹೇಳಿದರು.

ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಗರಣ ಬಹಿರಂಗವಾದ ನಂತರ ಪಕ್ಷದ ನಾಯಕರು ಮುಜುಗರ ಅನುಭವಿಸಿದ್ದಾರೆ. ಈ ಹಗರಣದ ಸತ್ಯಾಸತ್ಯತೆ ಏನಿದೆಯೋ ಗೊತ್ತಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ. ಆದರೆ ಈ ಬಗ್ಗೆ ಪಕ್ಷದ ನಾಯಕರು ಭಯಪಡುವ ಅಗತ್ಯ ಏನಿಲ್ಲ. ಪಕ್ಷದ ನಾಯಕರ ಜೊತೆ ಲಕ್ಷಾಂತರ ಮಂದಿ ಕಾರ್ಯಕರ್ತರು ಇದ್ದೇವೆ ಎಂದರು.

ಈ ಹಗರಣದ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾತ್ರ ಇದೆ. ರಾಜಕೀಯ ಪ್ರೇರಿತರಾಗಿ ಜೆಡಿಎಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಹುನ್ನಾರದಿಂದ ಈ ವಿಚಾರವನ್ನು ಡಿಕೆಶಿ ಬಹಿರಂಗ ಮಾಡಿದ್ದಾರೆ. ಆದರೆ ಆ ಪೆನ್ ಡ್ರೈವ್ ನಲ್ಲಿರುವ ಮಹಿಳೆಯರ ಮುಖವನ್ನು ತೋರಿಸಿ ಸಮಾಜಕ್ಕೆ ಅಗೌರವ ತಂದಿದ್ದಾರೆ. ಆ ಮಹಿಳೆಯರು ಸಮಾಜ ಹಾಗೂ ತಮ್ಮ ಕುಟುಂಬದಲ್ಲಿ ತಲೆ ಎತ್ತದಂತೆ ಮಾಡಿದ್ದಾರೆ. ಇದು ನಿಜಕ್ಕೂ ಸಮಾಜ ತಲೆ ತಗ್ಗಿಸುವಂತದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಎಂ.ಜಿ.ಕೆ. ಪ್ರಕಾಶ್, ಕೂರಣಗೆರೆ ರವಿ, ಕೆಂಗಲ್ಲಮೂರ್ತಿ, ಚಂದ್ರಕುಮಾರ್, ಅಜಿತ್, ಅನಿಲ್, ಮುನಿವೆಂಕಟಪ್ಪ, ಪಟ್ಲು ಕುಮಾರ್, ಪುಟ್ಟೇಗೌಡ, ಪುಟ್ಟರಾಜು, ಚಾಮರಾಜು, ಉಮೇಶ್, ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT