ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ಜಮೀನು ವ್ಯಾಜ್ಯ: ಮನೆಗೆ ನುಗ್ಗಿ ವೃದ್ಧ ದಂಪತಿಗೆ ಚಾಕು ಇರಿತ

Published 12 ಮೇ 2024, 14:19 IST
Last Updated 12 ಮೇ 2024, 14:19 IST
ಅಕ್ಷರ ಗಾತ್ರ

ಕನಕಪುರ: ದೂಂತೂರು ಗ್ರಾಮದಲ್ಲಿ ಜಮೀನು ವ್ಯಾಜ್ಯ ಸಂಬಂಧ ಮನೆಗೆ ನುಗ್ಗಿ ಮಲಗಿದ್ದ ವೃದ್ಧ ದಂಪತಿಯನ್ನು ಇಬ್ಬರು ದುಷ್ಕರ್ಮಿಗಳು  ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. 

ತಾಲ್ಲೂಕಿನ ಸಾತನೂರು ಹೋಬಳಿ ದೂಂತೂರು ಗ್ರಾಮದ ತಿಮ್ಮೇಗೌಡ ಮತ್ತು ಜಯಮ್ಮ ಹಲ್ಲೆಗೊಳಗಾಗಿ ದಂಪತಿ. ಇದೇ ಗ್ರಾಮದ ಕೃಷ್ಣ ಮತ್ತು ಕಾಂತಮಣಿ ಹಲ್ಲೆ ಆರೋಪಿಗಳು.

ಘಟನೆ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ತಿಮ್ಮೇಗೌಡ ಮತ್ತು ಜಯಮ್ಮ ಅವರು ಮನೆಯಲ್ಲಿ ಮಲಗಿದ್ದಾಗ ಆರೋಪಿಗಳಾದ ಕೃಷ್ಣ ಮತ್ತು ಕಾಂತಮಣಿ ಮೇ 8ರ ಬುಧವಾರ ರಾತ್ರಿ ಸುಮಾರು 9:30ಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾರೆ.

ದಂಪತಿಗಳು ಕಿರಚಿಕೊಂಡಾಗ ಅವರ ಸಹಾಯಕ್ಕೆ ಬಂದ ಗ್ರಾಮಸ್ಥರು ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮಾಹಿತಿ ತಿಳಿದ ಪುತ್ರಿ ಶಶಿ ದೂಂತೂರು ಗ್ರಾಮಕ್ಕೆ ಭೇಟಿ ನೀಡಿ ಮೇ 11ರಂದು ಸಾತನೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT