ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಅಂಗನವಾಡಿ ಕಾರ್ಯಕರ್ತೆಯರ ಪತ್ರ ಚಳವಳಿ

ಬೇಡಿಕೆ ಈಡೇರಿಸಲು ಮುಂಖ್ಯಮಂತ್ರಿಗೆ ಪತ್ರ
Published 17 ಜನವರಿ 2024, 16:05 IST
Last Updated 17 ಜನವರಿ 2024, 16:05 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಪತ್ರ ಚಳವಳಿ ಆರಂಭಿಸಿದರು.
ತಾಲ್ಲೂಕಿನ ಚಿಕ್ಕಮುದವಾಡಿ, ಚಾಕನಹಳ್ಳಿ, ಕಸಬಾ ವೃತ್ತಗಳ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.


ಗೌರಧನ ಹೆಚ್ಚಳ, ಕನಿಷ್ಟ ವೇತನ, ನಿವೃತ್ತಿ ವೇತನ, ಇಎಸ್‌ಐ, ಮಹಿಳಾ ಮತ್ತು ಮಕ್ಕಳ ಇಲಾಖೆಗೆ ನೀಡುತ್ತಿರುವ ಅನುದಾನ ಹೆಚ್ಚಳ, ಪೋಷಣ್ ಅಭಿಯಾನದ ಮೊಬೈಲ್ ಖರ್ಚಿಗಾಗಿ ನೀಡುತ್ತಿರುವ ಹಣ ಹೆಚ್ಚಳ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರವನ್ನು ಆಗ್ರಹಿಸಿದರು.

ಸರ್ಕರವು ಕೊಟ್ಟ ಮಾತಿನಂತೆ ₹15 ಸಾವಿರ ವೇತನ, ನಿವೃತ್ತಿ ಸಮಯದಲ್ಲಿ ₹3 ಲಕ್ಷ ಇಡಗಂಟು ನೀಡುವಂತೆ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸಂಘದ ಮಾಜಿ ಅಧ್ಯಕ್ಷ ಸುವರ್ಣಮ್ಮ, ಅಧ್ಯಕ್ಷೆ ಕಾವ್ಯ ಎಂ.ಎನ್‌, ಕಾರ್ಯದರ್ಶಿ ನಿರ್ಮಲ, ಖಜಾಂಚಿ ವಿಜಯ, ಸದಸ್ಯರಾದ ಕಮಲಮ್ಮ, ಸಣ್ಣಮ್ಮ, ಅನುಸೂಯ, ಗುಂಡು ಲಕ್ಷ್ಮಿ, ಶಾರದಮ್ಮ, ವೆಂಕಟಲಕ್ಷ್ಮಿ, ರಶ್ಮಿ, ಸಾವಿತ್ರಮ್ಮ, ಯಶೋಧಮ್ಮ, ಆರೋಗ್ಯಮೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT