ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು: ಕಾವೇರಿ ನೀರು ಪೂರೈಕೆಗೆ ಒತ್ತು

Published 4 ಮಾರ್ಚ್ 2024, 5:35 IST
Last Updated 4 ಮಾರ್ಚ್ 2024, 5:35 IST
ಅಕ್ಷರ ಗಾತ್ರ

ಕುದೂರು: ಗ್ರಾಮಸಭೆ ಅಭಿವೃದ್ಧಿಗೆ ಪೂರಕ ಎಂದು ಕುದೂರು ಗ್ರಾ.ಪಂ ಅಧ್ಯಕ್ಷೆ ಕುಸುಮ ಹೇಳಿದರು.

ಶನಿವಾರ ನಡೆದ 2023-24ನೇ ಸಾಲಿನ ಗ್ರಾಮಸಭೆ ಉದ್ಘಾಟಸಿ ಮಾತನಾಡಿದ ಅವರು, ಗ್ರಾಮಸ್ಥರು ಗ್ರಾಮಸಭೆಯಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿ ಮತ್ತು ವೈಯಕ್ತಿಕ ಕಾಮಗಾರಿ  ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿ.ಪಂ ಎ.ಇ ಶಿವರಾಮು ಮಾತನಾಡಿ, ಪ್ರತಿ ಮನೆಗಳಿಗೆ ಕಾವೇರಿ ನೀರು ಪೂರೈಸಲು ₹510 ಕೋಟಿ ಮಂಜೂರಾಗಿದೆ. 400 ಕಿಲೋಮೀಟರ್ ಪೈಪ್‌ಲೈನ್ ಅಳವಡಿಸಲಾಗುತ್ತಿದೆ ಎಂದರು.

ಜೆಜೆಎಂ ಕಾಮಗಾರಿ ಬಗ್ಗೆ ಗ್ರಾ.ಪಂಗೆ, ವಾಟರ್ ಮ್ಯಾನ್‌ಗಳಿಗೆ ಮಾಹಿತಿ ನೀಡಿಲ್ಲ. ಹೊಂದಾಣಿಕೆ ಇಲ್ಲದಿದ್ದರೆ ಯೋಜನೆ ಅನುಷ್ಠಾನ ಆಗುವುದಾದರೂ ಹೇಗೆ ಎಂದು ಪಿಡಿಒ ಪುರುಷೋತ್ತಮ್ ಪ್ರಶ್ನಿಸಿದರು.

ಕುದೂರಿನಲ್ಲಿ ಜೆಜೆಎಂ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಗ್ರಾಮದ ಹನುಮಂತರಾಜು ಸಭೆಯಲ್ಲಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ ಶಿವರಾಮು, ಅಗತ್ಯ ಕ್ರಮಕೈಗೊಳ್ಳಲಾಗುವುದು ಉತ್ತರ ನೀಡಿದರು.

ನರೇಗಾ ಅಧಿಕಾರಿ ಶಿವಮ್ಮ ಮಾತನಾಡಿ, ವಲಸೆ ಹೋಗುವುದು ತಡೆಗಟ್ಟಲು ಸರ್ಕಾರ ನರೇಗಾ ಯೋಜನೆ ಅನುಷ್ಠಾನಗೊಳಿಸಿದೆ. ರಸ್ತೆ, ಚರಂಡಿ, ಆಟದ ಮೈದಾನ, ಚೆಕ್ ಡ್ಯಾಂ, ಸ್ಮಶಾನ ಅಭಿವೃದ್ಧಿ ಮಾಡಬಹುದಾಗಿದೆ ಎಂದರು. 

ಪಿಡಿಒ ಪುರುಷೋತ್ತಮ್ ಮಾತನಾಡಿ, ನರೇಗಾ ಯೋಜನೆ ಬಗ್ಗೆ ಗ್ರಾ.ಪಂನಿಂದ ಲೋಪ ದೋಷವಾಗಿದೆ. ಇದನ್ನು ಸರಿಪಡಿಸಲಾಗುವುದು. ಕಸ ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು. 

ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷೆ ರಮ್ಯಾ ಜ್ಯೋತಿ, ಸದಸ್ಯರಾದ ಗಿರೀಶ್, ಬಾಲಕೃಷ್ಣ, ಭಾಗ್ಯಮ್ಮ ಪುಟ್ಟರಾಜು, ಉಮಾಶಂಕರ್, ಜಯರಾಮ್, ನಾಗರಾಜು, ರೇಖಾ ಸೋಮೇಶ್, ಅನುಸೂಯಮ್ಮ, ಗೀತಾ, ಉಷಾ, ಇಂದು ಲೋಕೇಶ್, ಲತಾ, ಗೋಪಾಲಕೃಷ್ಣ, ವೆಂಕಟೇಶ್, ಪಶುವೈದ್ಯೆ ಡಾ. ಜಯಶ್ರೀ, ಸಂತೋಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT