ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರೂ ಅಡುಗೆ ಕಲಿಯಲಿ: ಪ್ರೊ. ರಾಜಣ್ಣ ಡಿ

Published 8 ಡಿಸೆಂಬರ್ 2023, 15:58 IST
Last Updated 8 ಡಿಸೆಂಬರ್ 2023, 15:58 IST
ಅಕ್ಷರ ಗಾತ್ರ

ಮಾಗಡಿ: ಆಧುನಿಕ ಯುಗದಲ್ಲಿ ಅಡುಗೆ ಮಾಡುವುದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತ ಎಂಬುದು ಸರಿಯಲ್ಲ. ಬದಲಾಗಿ ಪುರುಷರು ಸಹ ಮನೆಯಲ್ಲಿ ಅಡುಗೆ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕು ಎಂದು ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಣ್ಣ ಡಿ. ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸ್‌ಸಿ ಮತ್ತು ಮಾನವಿಕ ವಿಭಾಗದ ವತಿಯಿಂದ ಶುಕ್ರವಾರ ನಡೆದ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿರು.

ಪುರಾಣ ಕಾಲದಲ್ಲೂ ಸಹ ಬಾಣಸಿಗರು ಗಂಡಸರು ಎಂಬುದನ್ನು ಕಾಣಬಹುದು. ಇಂದಿಗೂ ನಳಪಾಕ, ಭೀಮಪಾಕದಿಂದ ತಯಾರಾಗುತ್ತಿದ್ದ ಭೋಜನ ವ್ಯವಸ್ಥೆಯನ್ನು ಸ್ಮರಿಸುವವರಿದ್ದಾರೆ. ಮಾಗಡಿ ಸೀಮೆಯಲ್ಲಿ ಬಿಸಿ ಬಿಸಿ ರಾಗಿಮುದ್ದೆ, ಅವರೆಕಾಳಿನ ಇದುಕು ಬೇಳೆ ಸಾರು ಜನಜನಿತವಾಗಿದೆ. ನಾಟಿಕೋಳಿ, ಮೇಕೆ ಮಾಂಸವನ್ನು ಹಿರಿಯರ ಹಬ್ಬದಲ್ಲಿ ಪುರುಷರೇ ಸಾಮೂಹಿಕವಾಗಿ ಅಡುಗೆ ಮಾಡಿ ನೆಂಟರಿಗೆ ಬಡಿಸುವುದನ್ನು ಕಾಣಬಹುದು ಎಂದರು.

ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಕ್ರಿಯಾತ್ಮಕತೆ ಮತ್ತು ಕೌಶಲವನ್ನು ಗುರುತಿಸಿ, ಪ್ರೋತ್ಸಾಹಿಸಲು ಆಹಾರ ಮೇಳ ಆಯೋಜಿಸಲಾಗಿದೆ ಎಂದರು.

ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದರು. ಪ್ರಾಧ್ಯಾಪಕರು ಖರೀದಿಸಿ, ಆಹಾರ ಸವಿದರು.

ಐಸಿಕ್ಯೂಎಸ್ ಸಿ ಸಂಚಾಲಕಿ ಡಾ.ಸೀಮಾ ಕೌಸರ್, ಆಹಾರ ಮೇಳದ ಸಂಚಾಲಕರಾದ ಪ್ರೊ.ರಂಗನಾಥ್, ಡಾ.ಲೋಹಿತ್, ಶಿವಪ್ರಸಾದ್, ಅರುಣ್‌ಕುಮಾರ್‌, ರಾಘವೇಂದ್ರ ಆಚಾರ್, ಸುಮಾ, ಡಾ.ಭವಾನಿ ಇದ್ದರು. ಆಹಾರ ಮೇಳದಲ್ಲಿ ಉತ್ತಮವಾಗಿ ಆಹಾರ ತಯಾರು ಮಾಡಿ ಪ್ರದರ್ಶಿಸಿ, ಮಾರಾಟ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT